ಮುಳುಗಡೆಗೂ ಮುನ್ನ ಕಂಡ ಬಿದನೂರು ಕೃತಿಕಾರ ಎಡ್ವರ್ಡ್ ಡಿಸೋಜ ದಂಪತಿಯನ್ನು ಗೌರವಿಸಲಾಯಿತು. ಡಿ.ಮಂಜುನಾಥ್, ಮಧುಕರ್, ನಾರಾಯಣ ಕಾಮತ್, ಅಂಬ್ರಯ್ಯಮಠ ಇತರರಿದ್ದರು.  
ನ್ಯೂಸ್

ಇತಿಹಾಸ ಪ್ರಸರಣಕ್ಕೆ ಕೃತಿಗಳು ಸಹಕಾರಿ

ಹೊಸನಗರ: ಬಿದನೂರು ಪ್ರದೇಶಗಳಲ್ಲಿ ಶ್ರೇಷ್ಠ ಇತಿಹಾಸ ದಾಖಲಾಗಿದ್ದು, ಇಲ್ಲಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಲು ಪುಸ್ತಕಗಳು ಸಹಕಾರಿ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.

ನಗರದ ಗುಜರಿಪೇಟೆ ವೆಂಕಟರಮಣ ಕಲಾಭವನದಲ್ಲಿ ಕಸಾಪ ನಗರ ಘಟಕದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಎಡ್ವರ್ಡ್ ಡಿಸೋಜ ಅವರ ‘ಮುಳುಗಡೆಗೂ ಮುನ್ನ ನಾ ಕಂಡ ನನ್ನ ಬಿದನೂರು’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಸಾಹಿತಿ ನಿಟ್ಟೂರು ಡಾ. ಪಿ.ಶಾಂತಾರಾಮ ಪ್ರಭು, ಎಡ್ವರ್ಡ್ ಡಿಸೋಜ ಅವರು ಅರಣ್ಯ ಇಲಾಖೆ ಕರ್ತವ್ಯದಲ್ಲಿ ಇರುವಾಗಲೇ ತಮ್ಮ ಲೇಖನಗಳ ಕಿರುಹೊತ್ತಗೆ ತಂದವರು. ರಂಗಕರ್ಮಿ, ಸಾಮಾಜಿಕ ನಾಟಕಗಳ ಲೇಖಕ ಹಾಗೂ ನಿರ್ದೇಶನ ಮಾಡಿ ಯಶಸ್ಸು ಕಂಡವರು ಎಂದರು.

ಶೃಂಗೇರಿ ವಲಯ ಅರಣ್ಯಾಧಿಕಾರಿ ಮಧುಕರ್ ಮಾತನಾಡಿ, ಎಡ್ವರ್ಡ್ ಅರಣ್ಯ ಗಸ್ತು ಕರ್ತವ್ಯದಲ್ಲಿದ್ದಾಗ 2015ರಲ್ಲಿ ‘ನಗರದಲ್ಲಿ ಅವಿತು ಕುಳಿತ ಕವಿತೆ’ ಎಂಬ ಉತ್ತಮ ಕವಿತೆಗಳ ಪುಸ್ತಕ ಬಿಡುಗಡೆ ಮಾಡಿದ್ದನ್ನು ಸ್ಮರಿಸಿದರು. ಬಿದನೂರು ನಗರದ ಕುರಿತ ಪುಸ್ತಕದ ಲೇಖಕ ಎಸ್ಸಾಡಿ ದಂಪತಿಗಳಿಗೆ ಕಸಾಪ ನಗರ ಘಟಕ ಹಾಗೂ ನಾಗರಿಕರ ಪರವಾಗಿ ಸನ್ಮಾನಿಸಲಾಯಿತು.

ಕಸಾಪ ನಗರ ಘಟಕದ ಅಧ್ಯಕ್ಷ ನಾರಾಯಣ ಕಾಮತ್, ಸಾಹಿತಿ ಅಂಬ್ರಯ್ಯಮಠ, ಹೊಸನಗರ ತಾಲೂಕು ಕಸಾಪ ಅಧ್ಯಕ್ಷ ಗಣೇಶಮೂರ್ತಿ, ಫಾದರ್ ಗಿಲ್ಬರ್ಟ್ ಲೋಬೊ, ಚಂದ್ರಶೇಖರ ಶೆಟ್ಟಿ, ಸುಬ್ರಹ್ಮಣ್ಯ ಭಾಗವತ್, ಸಿ.ವಿ.ಚಂದ್ರಶೇಖರ್, ಫಿಲಿಪ್ ರೋಡ್ರಿಗಸ್, ಶ್ರೀಪತಿ ಹಳಗುಂದ, ನೇಮಿರಾಜ್, ವಸುಧಾ ಚೈತನ್ಯ, ಸುಪ್ರಿತ್ ಡಿಸೋಜ, ಶ್ರೀಧರ ಶೆಟ್ಟಿ ಇತರರಿದ್ದರು.