ಸೊರಬದಲ್ಲಿ ಏರ್ಪಡಿಸಿದ್ದ ದಸರಾ ಉತ್ಸವ ದಶಮಾನೋತ್ಸವದಲ್ಲಿ ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿದರು. ಹುಲ್ತಿಕೊಪ್ಪ ಶ್ರೀಧರ್, ಎಂ.ಬಿ.ರೇಣುಕಾಪ್ರಸಾದ್, ಎಂ.ಪಿ.ರತ್ನಾಕರ ಇತರರಿದ್ದರು.  
ನ್ಯೂಸ್

ಶ್ರದ್ಧಾಭಕ್ತಿ ಆರಾಧನೆಯಿಂದ ಕಾರ್ಯ ಯಶಸ್ವಿ

ಸೋಮಶೇಖರ ಎನ್

ಸೊರಬ: ನವರಾತ್ರಿಯಲ್ಲಿ ದೇವಿಯ ಸೇವೆಯನ್ನು ನಿಷ್ಠೆಯಿಂದ, ಶ್ರದ್ಧಾಭಕ್ತಿಯಿಂದ ಆರಾಧಿಸಿದಾಗ ಜೀವನದಲ್ಲಿ ನಾವು ಮಾಡುವ ಕಾರ್ಯ ಯಶಸ್ವಿಯಾಗುತ್ತವೆ ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ಚಂದ್ರಗುತ್ತಿಯಲ್ಲಿ ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಆಚರಣಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರ್ಮಿಕ ಮತ್ತು ದತ್ತಿ ಇಲಾಖೆ, ತಾಲೂಕು ಆಡಳಿತ, ಸ್ಥಳೀಯ ಗ್ರಾಪಂ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಹಮ್ಮಿಕೊಂಡ ದಶಮಾನೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಹುಲ್ತಿಕೊಪ್ಪ ಶ್ರೀಧರ್, ಗ್ರಾಪಂ ಉಪಾಧ್ಯಕ್ಷ ಎಂ.ಬಿ.ರೇಣುಕಾಪ್ರಸಾದ್, ಸದಸ್ಯ ಎಂ.ಪಿ.ರತ್ನಾಕರ, ತಾಪಂ ಮಾಜಿ ಸದಸ್ಯರಾದ ಸುನಿಲ್‌ಗೌಡ, ಎನ್.ಜಿ.ನಾಗರಾಜ್, ಪ್ರಮುಖರಾದ ಸದಾನಂದ ಗೌಡ ಕಡಸೂರು, ಸದಾನಂದ ಗೌಡ ನ್ಯಾರ್ಶಿ, ಸಮಿತಿಯ ವಸಂತ್ ಶೇಟ್, ಶಕುಂತಲಾ ಪಿ.ಶೇಟ್, ರೇಣುಕಾ ಶ್ರೀಧರ್, ಪ್ರಜ್ವಲ್ ಚಂದ್ರಗುತ್ತಿ ಇತರರಿದ್ದರು.