ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶ್ವೇಶ ತೀರ್ಥ ಶ್ರೀ ಪಾದಂಗಳವರ ಐದನೇ ಆರಾಧನಾ ಮಹೋತ್ಸವ ನಡೆಯಿತು. ಗೋಪಾಲಾಚಾರ್, ಮುರಳೀಧರ ತಂತ್ರಿ, ಸುಮಾ ರಾಘವೇಂದ್ರ, ಜಿ.ರಮಾಕಾಂತ್ ಇತರರಿದ್ದರು. 
ನ್ಯೂಸ್

ವಿಶ್ವೇಶ ತೀರ್ಥ ಶ್ರೀಪಾದಂಗಳ ಆರಾಧನೋತ್ಸವ

ಭದ್ರಾವತಿ: ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಗುರುವಾರ ವಿಶ್ವೇಶ ತೀರ್ಥ ಶ್ರೀಪಾದಂಗಳವರ 5ನೇ ಆರಾಧನಾ ಮಹೋತ್ಸವ ನಡೆಯಿತು.

ಆರಾಧನೋತ್ಸವದ ಅಂಗವಾಗಿ ಬೆಳಗ್ಗೆ 5ಕ್ಕೆ ಪಂಚಾಮೃತ ಅಭಿಷೇಕ, ಪವಮಾನ ಹೋಮ ನಡೆಸಲಾಯಿತು. ಪೇಜಾವರ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಸಿ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಿಸಲಾಯಿತು.

ಗೋಪಾಲಾಚಾರ್, ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳೀಧರ ತಂತ್ರಿ, ಸುಮಾ ರಾಘವೇಂದ್ರ, ಜಿ.ರಮಾಕಾಂತ್, ನಿರಂಜನಾಚಾರ್, ಸತ್ಯನಾರಾಯಣಾಚಾರ್, ಜಯತೀರ್ಥ, ಸುಧೀಂದ್ರ ಇತರರಿದ್ದರು.