ಭದ್ರಾವತಿ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಅಭ್ಯರ್ಥಿಗಳು. ಬಿ.ಕೆ.ಶಿವಕುಮಾರ್, ಎಚ್.ಲೋಕೇಶಪ್ಪ, ರವೀಂದ್ರ ನಾಯ್ದು ಇತರರಿದ್ದರು.  
ನ್ಯೂಸ್

ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು

ಭದ್ರಾವತಿ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ ಎಂದು ಸಂಘದ ನಿರ್ದೇಶಕ ಬಿ.ಕೆ.ಶಿವಕುಮಾರ್ ಹೇಳಿದರು.

ಎಲ್ಲರ ಸಹಕಾರದಿಂದ ಸಂಸ್ಥೆಯಲ್ಲಿರುವ ಸಮಸ್ಯೆಗಳನ್ನು ನಿವಾರಿಸಿ ಆರ್ಥಿಕವಾಗಿ ಸದೃಢಗೊಳಿಸಿ ರೈತರಿಗೆ ರಿಯಾಯಿತಿ ದರದಲ್ಲಿ ರಸಗೊಬ್ಬರ, ಗುಣಮಟ್ಟದ ಕೃಷಿ ಪರಿಕರಗಳನ್ನು ವಿತರಿಸಲಾಗುವುದು. ಕಾಂಗ್ರೆಸ್ ನೇತೃತ್ವದ ಸರ್ಕಾರ ಇರುವುದರಿಂದ ಹೆಚ್ಚಿನ ಅನುದಾನ ತರುವ ಮೂಲಕ ಗೊಬ್ಬರ, ಔಷಧಗಳನ್ನು ದಾಸ್ತಾನು ಮಾಡಿ ರೈತರಿಗೆ ನೀಡಲಾಗುವುದು. ಕಡದಕಟ್ಟೆ ಬಳಿ ಇರುವ ನಿವೇಶನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿರ್ದೇಶಕರಾಗಿ ಬಿ.ಕೆ.ಶಿವಕುಮಾರ್, ಎಚ್.ಲೋಕೇಶಪ್ಪ, ರವೀಂದ್ರ ನಾಯ್ಡು, ಸುರೇಶ್, ಬಿ.ಟಿ.ನಾಗರಾಜ್, ಡಿ.ಶಿವಶಂಕರ್, ಕೆ.ಶ್ರೀನಿವಾಸ್, ಕೃಷ್ಣಪ್ಪ, ಸತ್ಯನಾರಾಯಣ ರಾವ್, ಖಲೀಂ ಉಲ್ಲಾ, ಒ.ಎನ್.ರತ್ನಮ್ಮ ಹಾಗೂ ವಿನೋದಾಬಾಯಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್.ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್.ಷಡಾಕ್ಷರಿ, ಲೋಕೇಶ್, ದಶರಥಗಿರಿ, ನಾಗರಾಜ್ ಇತರರಿದ್ದರು.