ಗುರುಪೂರ್ಣಿಮೆ ಪ್ರಯುಕ್ತ ಸೊರಬ ಜಡೆ ಸಂಸ್ಥಾನ ಮಠದಲ್ಲಿ ಶ್ರೀ ಕುಮಾರಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪಾದಪೂಜೆ ಕಾರ್ಯಕ್ರಮ ಜರುಗಿತು. ಜ್ಯೋತಿ ಮಲ್ಲಿಕಾರ್ಜುನ, ನಾಗರಾಜ ಗೌಡ, ಗಂಗಾಧರ, ಜಯಶೀಲ ಗೌಡ ಇತರರಿದ್ದರು.  
ನ್ಯೂಸ್

ವಚನಗಳ ಸಾರದಲ್ಲಿ ಗುರುವಿನ ಮಹತ್ವ

ಸೊರಬ: ಮನುಷ್ಯನ ಮನಸ್ಸಿನೊಳಗೆ ಅಡಗಿರುವ ಅಜ್ಞಾನ ದೂರ ಮಾಡಲು ಗುರುವಿನ ಮಾರ್ಗದರ್ಶನ ಬೇಕು ಎಂದು ಜಡೆ ಸಂಸ್ಥಾನ ಮಠದ ಶ್ರೀ ಕುಮಾರಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ ಹೇಳಿದರು.

ಗುರುಪೂರ್ಣಿಮೆ ಪ್ರಯುಕ್ತ ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಭಕ್ತರ ಬದುಕಿನಲ್ಲಿ ಗುರುಗಳು ಅಧ್ಯಾತ್ಮ ಜ್ಯೋತಿಯಾಗಿರುತ್ತಾರೆ. ವಚನ ಸಾಹಿತ್ಯದ ಶಿವಶರಣರು ವಚನಗಳಲ್ಲಿ ಗುರುಗಳ ಮಹತ್ವ ಉಲ್ಲೇಖಿಸಿದ್ದಾರೆ. ಗುರುಗಳನ್ನು ಆರಾಧಿಸುವ ಪೂಜ್ಯ ಪರಂಪರೆ ಭಾರತೀಯ ಸಂಸ್ಕೃತಿಯಲ್ಲಿ ವೈಶಿಷ್ಟೃ ಹೊಂದಿದೆ ಎಂದು ತಿಳಿಸಿದರು.

ಸಾಲಿಗೆಯ ಜ್ಯೋತಿ ಮಲ್ಲಿಕಾರ್ಜುನ ಕುಟುಂಬದವರು ಪಾದಪೂಜೆ ಕಾರ್ಯ ನೇರವೇರಿಸಿದರು. ಅಕ್ಕನ ಬಳಗದವರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ನಾಗರಾಜ ಗೌಡ, ಗಂಗಾಧರ, ಜಯಶೀಲ ಗೌಡ, ಶ್ರೀಕಂಠ ಗೌಡ, ಮಲ್ಲಿಕಾರ್ಜುನ ಗೌಡ, ಮಂಜಪ್ಪ ಗೌಡ, ಮುತ್ತು ಗೌಡ, ಮೃತ್ಯುಂಜಯ ಗೌಡ, ಬಂಗಾರ ಸ್ವಾಮಿ, ದಯಾಗೌಡ, ರಾಜು ಗೌಡ, ಜ್ಯೋತಿ, ಲಕ್ಷ್ಮಿ, ಗೀತಾ, ಮಮತಾ ಇತರರಿದ್ದರು.