ಹಿರೇಮಾಗಡಿ ಶ್ರೀ ಶಿವಯೋಗಿ ದೇವರ ನೂತನ ಪಟ್ಟಾಧಿಕಾರ ಮಹೋತ್ಸವದ ಪ್ರಯುಕ್ತ ಶಿರಾಳಕೊಪ್ಪದಲ್ಲಿ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಎಂಬ ಸದ್ಭಾವನಾ ಪಾದಯಾತ್ರೆ ಸಂಭ್ರಮದಿಂದ ನೆರವೇರಿತು. ಶ್ರೀ ಸಿದ್ದೇಶ್ವರ ಸ್ವಾಮಿಜಿ, ಶ್ರೀ ಗದಿಗೆಯ್ಯ ದೇವರು ಬಟಕುರ್ಕಿ, ಶ್ರೀ ಸಿದ್ಧವೃಷಬೇಂದ್ರ ಸ್ವಾಮೀಜಿ ಇತರರಿದ್ದರು.  
ನ್ಯೂಸ್

ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಪಾದಯಾತ್ರೆ

ಶಿರಾಳಕೊಪ್ಪ: ಸಮೀಪದ ಹಿರೇಮಾಗಡಿ ಶ್ರೀ ಶಿವಯೋಗಿ ದೇವರ ನೂತನ ಪಟ್ಟಾಧಿಕಾರ ಮಹೋತ್ಸವ ಏ.18ರಿಂದ 21ರವರಗೆ ನಡೆಯಲಿದೆ.

ಮಹೋತ್ಸವ ಅಂಗವಾಗಿ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಎಂಬ ಸದ್ಭಾವನಾ ಪಾದಯಾತ್ರೆ ಬುಧವಾರ ಶಿರಾಳಕೊಪ್ಪ ಪಟ್ಟಣ ಮತ್ತು ಬೆಲವಂತನಕೊಪ್ಪದಲ್ಲಿ ನೆರವೇರಿತು.

ಪಾದಯಾತ್ರೆಯಲ್ಲಿ ವಿರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮಿಜಿ, ಶ್ರೀ ಗದಿಗೆಯ್ಯ ದೇವರು ಬಟಕುರ್ಕಿ, ಶ್ರೀ ಸಿದ್ಧವೃಷಭೇಂದ್ರ ಸ್ವಾಮೀಜಿ ಮತ್ತು ಕಿರಿಯ ಶ್ರೀಗಳು ಭಾಗವಹಿಸಿದ್ದರು. ಭಕ್ತರು ಪಾದಯಾತ್ರೆಯನ್ನು ಸಂಭ್ರಮದಿಂದ ಬರಮಾಡಿಕೊಂಡರು.