ಹೊಳೆಹೊನ್ನೂರು ಸಮೀಪದ ಸನ್ಯಾಸಿಕೋಡಮಗ್ಗೆ ಗ್ರಾಮದಲ್ಲಿ ಮಂಗೋಟೆವರೆಗಿನ ರಸ್ತೆ ಡಾಂಬರೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಶಾರದಾ ಪೂರ‌್ಯಾನಾಯ್ಕ ಗುದ್ದಲಿ ಪೂಜೆ ನೆರವೇರಿಸಿದರು. ಎಸ್.ಆರ್.ಸತೀಶ್, ಮಂಗಳಾ ಕರಿಬಸಯ್ಯ, ಬಿ.ಎಂ.ನಾಗೇಶಪ್ಪ ಇತರರಿದ್ದರು.  
ನ್ಯೂಸ್

ಅಭಿವೃದ್ಧಿಗೆ ಅನುದಾನ ನೀಡದ ರಾಜ್ಯ ಸರ್ಕಾರ

ಹೊಳೆಹೊನ್ನೂರು: ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿ ಮಾಡುವ ಆಸೆ ಇದ್ದರೂ ರಾಜ್ಯ ಸರ್ಕಾರದ ಅನುದಾನ ಕೊರತೆಯಿಂದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಆಗುತ್ತಿಲ್ಲ ಎಂದು ಶಾಸಕಿ ಶಾರದಾ ಪೂರ‌್ಯಾನಾಯ್ಕ ಹೇಳಿದರು.

ಸಮೀಪದ ಸನ್ಯಾಸಿಕೋಡಮಗ್ಗೆ ಗ್ರಾಮದ ಗ್ರಾಪಂ ಆವರಣದಲ್ಲಿ ಏರ್ಪಡಿಸಿದ್ದ ಸನ್ಯಾಸಿಕೋಡಮಗ್ಗೆ ಗ್ರಾಮದಿಂದ ನಾಗಸಮುದ್ರ ಗ್ರಾಮದವರೆಗೆ ಕೇಂದ್ರ ರಸ್ತೆ ನಿಧಿಯಿಂದ 1.80 ಕೋಟಿ ರೂ. ವೆಚ್ಚದಲ್ಲಿ 2.9 ಕಿ.ಮೀ. ರಸ್ತೆ ಡಾಂಬರೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮಾಂತರ ಪ್ರದೇಶದಲ್ಲಿ ಹಾಳಾಗಿರುವ ರಸ್ತೆ ಬಗ್ಗೆ ಜನರು ಮಾಹಿತಿ ನೀಡಬೇಕು. ರಸ್ತೆಗಳ ಅಭಿವೃದ್ಧಿ ಬಗ್ಗೆ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತದೆ. ಆದ್ಯತೆ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಆರ್.ಸತೀಶ್, ಗ್ರಾಪಂ ಸದಸ್ಯರಾದ ಮಂಗಳಾ ಕರಿಬಸಯ್ಯ, ಬಿ.ಎಂ.ನಾಗೇಶಪ್ಪ, ಎಚ್.ವೈ.ವಿಜಯಕುಮಾರ್, ಜಯಮ್ಮ ರಾಜಪ್ಪ, ನೀಲಮ್ಮ ರವಿಕುಮಾರ, ರಾಜು, ಜೆಡಿಎಸ್ ಗ್ರಾಮಾಂತರ ಕಾರ್ಯಾಧ್ಯಕ್ಷ ಕಾಂತರಾಜ್, ಗಂಗನಗೌಡ, ಹನುಮಂತಪ್ಪ ಗೌಡ, ಶ್ರೀನಿವಾಸ್ ಇತರರಿದ್ದರು.