ಸೊರಬದಲ್ಲಿ ಏರ್ಪಡಿಸಿದ್ದ ಹೋಳಿ ಹುಣ್ಣಿಮೆ ಕಾರ್ಯಕ್ರಮವನ್ನು ಡಾ. ಎಚ್.ಇ.ಜ್ಞಾನೇಶ್ ಉದ್ಘಾಟಿಸಿದರು. ವೀಣಾ, ಪ್ರಸನ್ನಕುಮಾರ್, ರೂಪಾ ಮಧುಕೇಶ್ವರ ಇತರರಿದ್ದರು.  
ನ್ಯೂಸ್

ಅಧ್ಯಾತ್ಮದ ಅನುಭವ ದೊರೆತರೆ ನೆಮ್ಮದಿ

ಸೊರಬ: ಪ್ರತಿಯೊಬ್ಬರೂ ಒತ್ತಡದ ಜೀವನಶೈಲಿ ನಡೆಸುತ್ತಿದ್ದು, ಅಧ್ಯಾತ್ಮದ ಅನುಭವ ದೊರೆತಾಗ ಮಾತ್ರ ನೆಮ್ಮದಿ ಕಾಣಲು ಸಾಧ್ಯ ಎಂದು ಸಮಾಜ ಸೇವಕ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.

ಪಟ್ಟಣದ ಚಾಮರಾಜಪೇಟೆಯ ಪ್ರಜಾಪಿತ ಬ್ರಹ್ಮಕುಮಾರಿ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಹೋಳಿ ಹುಣ್ಣಿಮೆ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಧ್ಯಾತ್ಮದಿಂದ ನಿಜವಾದ ಸ್ಫೂರ್ತಿ ಲಭಿಸಲು ಸಾಧ್ಯ ಎಂದು ತಿಳಿಸಿದರು.

ಬ್ರಹ್ಮಕುಮಾರಿ ವೀಣಾ ಮಾತನಾಡಿ, ಹೋಳಿ ಪವಿತ್ರ ಹಬ್ಬ. ನಮ್ಮಲ್ಲಿರುವ ದುರ್ಗುಣ, ಕೆಟ್ಟ ಆಲೋಚನೆ, ಅಹಂಕಾರ ದೂರವಾಗಿ ಪರಮಾತ್ಮನ ಅನುಗ್ರಹದಿಂದ ಉತ್ತಮ ಜೀವನ ನಡೆಸುವುದೇ ಹೋಳಿ ಹಬ್ಬದ ವಿಶೇಷ ಎಂದರು. ಪುರಸಭೆ ಸದಸ್ಯ ಪ್ರಸನ್ನಕುಮಾರ್, ರೂಪಾ ಮಧುಕೇಶ್ವರ, ಸುಜಾತಾ ಜೋತಾಡಿ ಇತರರಿದ್ದರು.