ಸೊರಬದ ಗುಂಡಶೆಟ್ಟಿಕೊಪ್ಪದಲ್ಲಿ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಬಯಲು ಜಂಗಿ ಕುಸ್ತಿ ಪಂದ್ಯದಲ್ಲಿ ಗೆಲುವು ಸಾಧಿಸಿದ ಕುಸ್ತಿಪಟು ಶೇಖರಪ್ಪ ಹಾವೇರಿಗೆ ಬಹುಮಾನ ನೀಡಲಾಯಿತು. ನಿಂಗಪ್ಪ ಗುಂಡಶೆಟ್ಟಿಕೊಪ್ಪ, ನಾಗರಾಜಗೌಡ ಚಿಕ್ಕಾವಲಿ ಇತರರಿದ್ದರು.  
ನ್ಯೂಸ್

ಬಂಗಾರದ ಬಳೆ ಗೆದ್ದ ಶೇಖರಪ್ಪ

ಸೊರಬ: ತಾಲೂಕಿನ ಗುಂಡಶೆಟ್ಟಿಕೊಪ್ಪದ ಶ್ರೀ ಚನ್ನಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಬಯಲು ಜಂಗಿ ಕುಸ್ತಿಯಲ್ಲಿ ಶೇಖರಪ್ಪ ಹಾವೇರಿ ಬಂಗಾರದ ಬಳೆ ಗೆದ್ದರು. ಪಂಕಜ್ ದಾವಣಗೆರೆ ಸೋತರು.

ಅರುಣ್ ತಾಳಗುಂದ ವಿರುದ್ಧದ ಪಂದ್ಯದಲ್ಲಿ ಗುರಾನ್ ಶಿರಾಳಕೊಪ್ಪ ಬೆಳ್ಳಿ ಗದೆ ಗೆದ್ದರು. ರಾಜ್ಯದ ವಿವಿಧೆಡೆಯಿಂದ ಕುಸ್ತಿಪಟುಗಳು ಆಗಮಿಸಿದ್ದರು. ಬೆಳ್ಳಿ ಬಳೆ ಮತ್ತು ನಗದು ಬಹುಮಾನ ಪಡೆದುಕೊಂಡರು.

ನಿಂಗಪ್ಪ ಗುಂಡಶೆಟ್ಟಿಕೊಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜಗೌಡ ಚಿಕ್ಕಾವಲಿ, ಈಶ್ವರ್, ಪಾಣಿರಾಜಪ್ಪ, ರಾಜ ಮಳಲಗದ್ದೆ, ಲೋಕಪ್ಪ, ಮಾಲತೇಶ್ ಕೊಡಕಣಿ, ಬಸವರಾಜ ಗೌಡ, ಕೃಷ್ಣಮೂರ್ತಿ ಕೊಡಕಣಿ, ಗುರುರಾಜ್, ನಾಗರಾಜ್ ಗುಂಡಶೆಟ್ಟಿಕೊಪ್ಪ, ಶಶಿಕಾಂತ ಗೌಡ, ದೇವರಾಜ್, ಮೇಘರಾಜ ಇತರರಿದ್ದರು.