ಸಾಗರ ತಾಲೂಕಿನ ಹೊನ್ನೆಸರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆಯಿಂದ ನಿವೃತ್ತರಾದ ಬಿಸಿಯೂಟ ಸಿಬ್ಬಂದಿಯನ್ನು ಬೀಳ್ಕೊಡಲಾಯಿತು. ಎಚ್.ವಿ.ಜಯಂತಿ, ಸುರೇಶ್, ವಿದ್ಯಾ, ಮೀನಾಕ್ಷಮ್ಮ ಇತರರಿದ್ದರು.  
ನ್ಯೂಸ್

ಕಾಯಕದಲ್ಲಿ ಸೇವಾ ಭಾವನೆ ಅಗತ್ಯ

ಸಾಗರ: ತಾಲೂಕಿನ ಹೊನ್ನೆಸರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆಯಿಂದ ನಿವೃತ್ತರಾದ ಬಿಸಿಯೂಟ ಸಿಬ್ಬಂದಿ ವಿದ್ಯಾ ಹಾಗೂ ಮೀನಾಕ್ಷಮ್ಮ ಅವರನ್ನು ಬೀಳ್ಕೊಡಲಾಯಿತು.

ಹಿರಿಯ ಶಿಕ್ಷಕಿ ಎಚ್.ವಿ.ಜಯಂತಿ ಮಾತನಾಡಿ, ನಾವು ಮಾಡುವ ಕಾಯಕದಲ್ಲಿ ಸೇವಾ ಭಾವನೆ ಅಗತ್ಯ. ಬಿಸಿಯೂಟ ಕಾರ್ಯದಲ್ಲಿ ಅತ್ಯಂತ ಬದ್ಧತೆಯಿಂದ ಸೇವೆ ಸಲ್ಲಿಸಿದ್ದಾರೆ. ಅಕ್ಷರ ದಾಸೋಹ ಯೋಜನೆ ಪ್ರಾರಂಭದ ದಿನದಿಂದ ಈವರೆಗೆ ಉತ್ತಮ ಸೇವೆ ಸಲ್ಲಿಸಿರುತ್ತಾರೆ ಎಂದು ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ಮಾತನಾಡಿ, ಸರ್ಕಾರ ಬಿಸಿಯೂಟ ಕಾರ್ಯಕರ್ತೆಯರಿಗೆ ನಿವೃತ್ತಿ ನಂತರವೂ ಆರ್ಥಿಕ ಸಹಕಾರ ನೀಡುವ ಚಿಂತನೆ ನಡೆಸಬೇಕಿದೆ ಎಂದರು. ಪ್ರಭಾರ ಮುಖ್ಯಶಿಕ್ಷಕ ನೂರ್ ಅಹ್ಮದ್, ಶಿಕ್ಷಕರಾದ ಭವಾನಿ, ವೇದಾವತಿ, ಸುಧಾ, ರವಿ, ಕಲಾವತಿ, ಕೃಪಾ, ದಿವ್ಯಾ, ಶೈಲಾ ಇತರರಿದ್ದರು.