ವಾರಾಹಿ ಮಾಣಿ ಯೋಜನೆಯ ಉಸ್ತುವಾರಿ ಅಧಿಕಾರಿ ಪುರುಷೋತ್ತಮ ಅವರು ಭದ್ರತೆ ಕುರಿತು ಸಿಬ್ಬಂದಿಗೆ ಮಾಹಿತಿ ನೀಡಿದರು. ಬಿ.ಸಿ.ಮಹೇಶ್, ಮಲ್ಲಪ್ಪ, ಕಿಶೋರ ಶೆಟ್ಟಿ ಇತರರಿದ್ದರು.  
ನ್ಯೂಸ್

ವಾರಾಹಿ, ಮಾಣಿ ಯೋಜನೆಯಲ್ಲಿ ಭದ್ರತೆ

ಸೋಮಶೇಖರ ಎನ್

ಹೊಸನಗರ: ಇತ್ತೀಚಿನ ರಾಷ್ಟ್ರೀಯ ವಿದ್ಯಮಾನದ ಹಿನ್ನೆಲೆಯಲ್ಲಿ ತುರ್ತು ಸಂದರ್ಭ ಎದುರಿಸಲು ಸನ್ನದ್ಧರಾಗಬೇಕು ಎಂದು ವಾರಾಹಿ, ಮಾಣಿ ಯೋಜನೆ ಉಸ್ತುವಾರಿ ಅಧಿಕಾರಿ ಪುರುಷೋತ್ತಮ ಸೂಚಿಸಿದರು.

ತಾಲೂಕಿನ ಮಾಣಿ ಜಲವಿದ್ಯುದಾಗಾರ, ವಾರಾಹಿ ಭೂಗರ್ಭ ವಿದ್ಯುದಾಗಾರದಲ್ಲಿ ಕೆಪಿಸಿಎಲ್ ಭದ್ರತಾ ಕುರಿತು ಹೈಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ಸಿಬ್ಬಂದಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯುದಾಗಾರದಲ್ಲಿ ಪೊಲೀಸ್ ಇಲಾಖೆಯ ಆಂತರಿಕಾ ಭದ್ರತಾ ವಿಭಾಗದ (ಐಎಸ್‌ಡಿ) ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್) ಸಿಬ್ಬಂದಿ ಕಾವಲು ಇದೆ. ಸಿಬ್ಬಂದಿ ಕೊರತೆ ಇದ್ದರೂ ನಿಭಾಯಿಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳ ಕುರಿತು ಸಿಬ್ಬಂದಿಗೆ ಅರಿವು ಮೂಡಿಸಿದರು. ಕೆಪಿಸಿ ಹೊಸಂಗಡಿ ಅಧೀಕ್ಷಕ ಅಭಿಯಂತ ಬಿ.ಸಿ.ಮಹೇಶ್, ಇಇ ಮಲ್ಲಪ್ಪ, ಎಇಇ ಕಿಶೋರ ಶೆಟ್ಟಿ, ಎಎಸ್‌ಐ ಪ್ರಕಾಶ್, ಕೆಪಿಸಿ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.