ಸೊರಬದ ನೆಲ್ಲಿಕೊಪ್ಪ ಗ್ರಾಮದಲ್ಲಿ ಗ್ರಾಮ ದೇವರು ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಹಾಗೂ ಧರ್ಮಸಭೆಯಲ್ಲಿ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ ಇತರರಿದ್ದರು.  
ನ್ಯೂಸ್

ನೆಲ್ಲಿಕೊಪ್ಪ ಗ್ರಾಮದಲ್ಲಿ ಗ್ರಾಮ ದೇವರು ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ

ಸೊರಬ: ಆತ್ಮ ಶುದ್ಧವಾಗಿದ್ದರೆ ನಾವು ಮಾಡುವ ಕೆಲಸ ಭಗವಂತನಿಗೆ ಸಮರ್ಪಿತವಾಗುತ್ತದೆ ಎಂದು ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕು ನೆಲ್ಲಿಕೊಪ್ಪ ಗ್ರಾಮದಲ್ಲಿ ಗ್ರಾಮ ದೇವರು ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಹಾಗೂ ಧರ್ಮಸಭೆ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಮನಸ್ಸನ್ನು ಶುದ್ಧಗೊಳಿಸುವುದು ಬಹುಕಷ್ಟ. ಧರ್ಮದ ಆಚರಣೆಗಳಿಂದ ಮನಸ್ಸನ್ನು ಸ್ವಚ್ಛಗೊಳಿಸಿಕೊಳ್ಳಬಹುದು. ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳದೆ ಧ್ಯಾನ, ಜಪ, ತಪಸ್ಸು, ದಾನ, ದೇಣಿಗೆ ಏನು ಮಾಡಿದರೂ ಸತ್ಫಲ ನೀಡುವುದಿಲ್ಲ ಎಂದು ತಿಳಿಸಿದರು.

ತುರಬಿಗುಡ್ಡ ಸಂಸ್ಥಾನ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಬಹುವರ್ಷಗಳಿಂದ ನಡೆದುಕೊಂಡು ಬಂದಿರುವ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದೆ. ಧರ್ಮಸಭೆಯಲ್ಲಿ ಒಳ್ಳೆಯ ವಿಚಾರಗಳು ಚಿಂತನೆ ಆಗಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಹಿರೇಮಾಗಡಿ ಮಹಾಸಂಸ್ಥಾನದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ನೆಲ್ಲಿಕೊಪ್ಪದ ಭವ್ಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆದಿದೆ. ಭವ್ಯ ಶೀಲಾ ದೇಗುಲ, ಭವ್ಯ ರಥ ನಿರ್ಮಿಸಿ ಜಾತ್ರೆ ಮಾಡಿರುವ ಶ್ರಮ ಅದ್ಭುತ ಎಂದು ತಿಳಿಸಿದರು.ತಾಪಂ ಮಾಜಿ ಸದಸ್ಯ ನರೇಂದ್ರ ವಡೆಯರ್, ಜಿಪಂ ಮಾಜಿ ಸದಸ್ಯ ವೀರೇಶ್ ಕೋಟಗಿ, ಗ್ರಾಪಂ ಅಧ್ಯಕ್ಷ ಅತಿತ್ ವಡೆಯರ್, ಮಹೇಶ್ ಮೂಡಿ, ಕಾರ್ತಿಕ್ ಸಾಹುಕಾರ್, ಗ್ರಾಮಸ್ಥರು ಇದ್ದರು.