ಸೊರಬ: ಪಟ್ಟಣದ ಮುರುಘಾ ಮಠದಲ್ಲಿ ಪೂಜ್ಯರ ಸಂಕಲ್ಪದಂತೆ ಎಲ್ಲ ಧರ್ಮ ಹಾಗೂ ಸಮುದಾಯಗಳ ಕಲ್ಯಾಣ ಕಾರ್ಯಕ್ರಮ, ಸಭೆ ಸಮಾರಂಭಗಳನ್ನು ನಡೆಸುವ ಉದ್ದೇಶದಿಂದ ಭವ್ಯ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಮುರುಘಾ ಮಠದ ಸಭಾಭವನದ ಪ್ರಧಾನ ಬಾಗಿಲು ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಭಾ ಮಂಟಪ್ಪಕ್ಕೆ ಶಕುಂತಲಾ ಹಾಗೂ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಹೆಸರು ನಾಮಕರಣ ಮಾಡಲಾಗುವುದು ಎಂದು ತಿಳಿಸಿದರು. ಮಠದ ಸಭಾಭವನವು ಎಲ್ಲರ ಸಹಕಾರದಿಂದ ನಿಮಾರ್ಣವಾಗುತ್ತಿದೆ. ಎಲ್ಲ ಸಮುದಾಯದವರು ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ ಎಂದರು.
ಸಚಿವ ಮಧು ಬಂಗಾರಪ್ಪ ನಿಮಾರ್ಣವಾಗುತ್ತಿರುವ ಸಮುದಾಯ ಭವನದ ಕಾಮಗಾರಿ ವೀಕ್ಷಿಸಿ, ಸಮುದಾಯ ಭವನಕ್ಕೆ 25 ಲಕ್ಷ ರೂ. ದೇಣಿಗೆ ನೀಡುವುದಾಗಿ ತಿಳಿಸಿದರು. ಜಡೆ ಸಂಸ್ಥಾನ ಮಠದ ಶ್ರೀ ಕುಮಾರಕೆಂಪಿನ ಸಿದ್ದವೃಷಭೇಂದ್ರ ಸ್ವಾಮೀಜಿ, ಶಾಂತಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ತರೀಕೆರೆ ನುಲಿಯ ಚಂದಯ್ಯ ಗುರುಪೀಠದ ಶ್ರೀ ಸಿದ್ದವೃಷಭೇಂದ್ರ ಸ್ವಾಮೀಜಿ, ಯಾದಗಿರಿಯ ಶ್ರೀ ಪ್ರಭುಲಿಂಗ ಸ್ವಾಮೀಜಿ, ಪ್ರಮುಖರಾದ ಎಂ.ಆರ್ ಪಾಟೀಲ್, ಜಯಶೀಲಗೌಡ, ಡಾ. ಜ್ಞಾನೇಶ್, ವಿಜೇಯಂದ್ರ ಗೌಡ, ಶಂಕರ ಶೇಟ್, ಶಿವಯೋಗಿ ಇತರರಿದ್ದರು.