ಭದ್ರಾವತಿಯಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರನ್ನು ಗೌರವಿಸಲಾಯಿತು. ಜಿ.ಧರ್ಮಪ್ರಸಾದ್, ಕೆ.ಎಚ್.ತೀರ್ಥಯ್ಯ, ಸುಬೇದಾರ್ ಗುಲ್ಗುಲೆ ಇತರರಿದ್ದರು.  
ನ್ಯೂಸ್

ಕೋಟ್ಯಂತರ ಜನರಿಗೆ ಕೇಂದ್ರ ಸರ್ಕಾರದ ಸೌಲಭ್ಯ

ಭದ್ರಾವತಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 11 ವರ್ಷ ಪೂರೈಸಿದ ಹಿನ್ನೆಲೆ ಹಾಗೂ ಆಪರೇಷನ್ ಸಿಂಧೂರ ಯಶಸ್ಸಿಗೆ ಕಾರಣರಾದ ಭಾರತೀಯ ವೀರಯೋಧರಿಗೆ ಗೌರವ ಸಮರ್ಪಣೆ ಅಂಗವಾಗಿ ದೇಶ ಸೇವೆ ಮಾಡಿದ ಮಾಜಿ ಸೈನಿಕರಿಗೆ ನಗರದ ಹುತ್ತಾ ಹಾಗೂ ಜನ್ನಾಪುರ ಮಹಾಶಕ್ತಿ ಕೇಂದ್ರಗಳಲ್ಲಿ ಗೌರವಿಸಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೀನದಯಾಳ್ ಮಾತನಾಡಿ, ಪ್ರಧಾನಿ ಮೋದಿ ಉತ್ತಮ ಆಡಳಿತ ನಡೆಸುತ್ತಿದ್ದು, ಜಿಲ್ಲೆಯಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ವಿಮಾನ ನಿಲ್ದಾಣ, ರಸ್ತೆ ಅಭಿವೃದ್ಧಿ, ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿದ್ದಾರೆ. ರೈತರಿಗೆ ಹಲವಾರು ಯೋಜನೆಗಳು ಕೇಂದ್ರದಿಂದ ಜಾರಿಯಾಗಿ ದೇಶದ ಕೋಟ್ಯಂತರ ಜನರಿಗೆ ತಲುಪಿದೆ ಎಂದರು.

ನಗರ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಗ್ರಾಮಾಂತರ ಅಧ್ಯಕ್ಷ ಕೆ.ಎಚ್.ತೀರ್ಥಯ್ಯ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗುಲ್ಗುಲೆ, ಶ್ರೀನಿವಾಸ್, ಕಮಾಂಡೋ ಗಿರೀಶ್, ಸುರೇಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಚನ್ನೇಶ್, ಅಣ್ಣಪ್ಪ, ಮಂಜಣ್ಣ, ರಾಜಶೇಖರ್ ಮತ್ತಿತರರಿದ್ದರು.