ಸಾಗರ: ರಾಷ್ಟ್ರೀಯ ಸ್ವಯಂಸೇವಕ ಸಂಘ ನೂರು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೊಸನಗರ ತಾಲೂಕು ಸಂಪರ್ಕ ಪ್ರಮುಖ್ ಗಣೇಶ್ ಮಧುಕರ್ ಹೇಳಿದರು.
ನಗರದ ನೆಹರು ಮೈದಾನದಲ್ಲಿ ಆರ್‌ಎಸ್‌ಎಸ್‌ಗೆ ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೌದ್ಧಿಕ್ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಕುಟುಂಬ ಪ್ರಬೋಧಿನಿ, ಸ್ವದೇಶಿ ವಸ್ತುಗಳ ಬಳಕೆ, ಸಾಮರಸ್ಯ, ಪರಿಸರ ಸಂರಕ್ಷಣೆ ಹಾಗೂ ನಾಗರಿಕ ಸಂಹಿತೆ ಸೇರಿ ಐದು ವಿಷಯ ಕೇಂದ್ರೀಕರಿಸಿಕೊಂಡು ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಯಿತು. ಸಂಘದ ನಗರ ಸಂಚಾಲಕ ರವೀಂದ್ರ ಭಟ್, ಅ.ಪು.ನಾರಾಯಣಪ್ಪ, ಟಿ.ಡಿ.ಮೇಘರಾಜ್, ಗಣೇಶ್ ಪ್ರಸಾದ್, ಪ್ರಸನ್ನ ಕೆರೆಕೈ, ಶ್ರೀನಿವಾಸ್ ಮೇಸ್ತ್ರಿ, ನಂಜುಂಡಸ್ವಾಮಿ, ಪರಶುರಾಮ್, ಸಂತೋಷ್ ಶೇಟ್, ಕೋಮಲ್ ರಾಘವೇಂದ್ರ, ಪ್ರಾಣೇಶ್, ಕೆ.ಎಸ್.ಪ್ರಶಾಂತ್, ಬಿ.ಎಚ್.ರಾಘವೇಂದ್ರ ಇತರರಿದ್ದರು.