ರಿಪ್ಪನ್‌ಪೇಟೆಯ ಹಾಲುಗುಡ್ಡೆ ಗ್ರಾಮದ ಮಾದ್ಲಾರದಿಂಬ ಶ್ರೀ ರಾಮ ದೇವಸ್ಥಾನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 1 ಲಕ್ಷ ರೂ. ಸಹಾಯಧನದ ಚೆಕ್ ವಿತರಿಲಾಯಿತು. ಮುರುಳಿಧರ ಶೆಟ್ಟಿ, ಪ್ರದೀಪ್, ನಟರಾಜ್, ಜಯಪ್ರಕಾಶ್ ಇತರರಿದ್ದರು.  
ನ್ಯೂಸ್

ಶ್ರೀ ರಾಮ ದೇವಸ್ಥಾನಕ್ಕೆ 1 ಲಕ್ಷ ರೂ. ದೇಣಿಗೆ

ರಿಪ್ಪನ್‌ಪೇಟೆ: ಬಾಳೂರು ಗ್ರಾಪಂ ವ್ಯಾಪ್ತಿ ಹಾಲುಗುಡ್ಡೆ ಗ್ರಾಮದ ಮಾದ್ಲಾರದಿಂಬ ಶ್ರೀ ರಾಮ ದೇವಸ್ಥಾನಕ್ಕೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 1 ಲಕ್ಷ ರೂ. ಸಹಾಯಧನದ ಚೆಕ್‌ಅನ್ನು ಜಿಲ್ಲಾ ನಿರ್ದೇಶಕ ಮುರಳಿಧರ ಶೆಟ್ಟಿ ವಿತರಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘಗಳು ಸಾಲ ನೀಡುವುದು ಮಾತ್ರವಲ್ಲದೆ ಸಮುದಾಯ ಅಭಿವೃದ್ಧಿ, ಅಸಹಾಯಕರಿಗೆ ಸೂರು, ನಿರ್ಗತಿಕರಿಗೆ ಮಾಶಾಸನ, ಅಂತರ್ಜಲ ವೃದ್ಧಿಗೆ ಕೆರೆಕಟ್ಟೆಗಳ ಅಭಿವೃದ್ಧಿ, ದೇವಸ್ಥಾನ ಮಂದಿರಗಳ ನಿರ್ಮಾಣಕ್ಕೆ ಸಹಾಯಧನ ಸೇರಿ ಇತರ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದೆ. ಮಾದ್ಲಾರದಿಂಬದ ಗ್ರಾಮಸ್ಥರ ಮನವಿ ಮೇರೆಗೆ ಧರ್ಮಾಧಿಕಾರಿಗಳ ನಿರ್ದೇಶನದಂತೆ ಸಹಾಯಧನ ನೀಡಲಾಗಿದೆ ಎಂದು ಮುರಳಿಧರ ಶೆಟ್ಟಿ ತಿಳಿಸಿದರು.

ತಾಲೂಕು ಯೋಜನಾಧಿಕಾರಿ ಪ್ರದೀಪ್, ಯೋಜನಾ ಮೇಲ್ವಿಚಾರಕ ನಟರಾಜ್, ದೇವಸ್ಥಾನ ಸಮಿತಿ ಅಧ್ಯಕ್ಷ ಜಯಪ್ರಕಾಶ್, ಮುಖಂಡರಾದ ಕೃಷ್ಣಮೂರ್ತಿಗೌಡ ಇತರರಿದ್ದರು.