ನ್ಯೂಸ್

ಕುಟುಂಬಸ್ಥರೊಂದಿಗೆ ಕಟೀಲು ದುರ್ಗಾಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಶಿಲ್ಪಾ ಶೆಟ್ಟಿ

Webdesk - Manjunatha B

ದಕ್ಷಿಣ ಕನ್ನಡ: ಬಾಲಿವುಡ್​ ನಟಿ, ಕನ್ನಡತಿ ಶಿಲ್ಪಾ ಶೆಟ್ಟಿ ಶನಿವಾರ ಕುಟುಂಬ ಸಮೇತರಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ಧಾರೆ.

ದೇವಳದ ವತಿಯಿಂದ ನಟಿಗೆ ದೇವರ ಶೇಷ ವಸ್ತ್ರ ಪ್ರಸಾದ ನೀಡಿ ಆಶೀರ್ವದಿಸಲಾಯಿತು.

ಯಕ್ಷಗಾನ ವೀಕ್ಷಣೆ

ದೇವಿಯ ದರ್ಶನ ಪಡೆದ ನಂತರ ಶಿಲ್ಪಾ ಶೆಟ್ಟಿ ಯಕ್ಷಗಾನವನ್ನು ವೀಕ್ಷಿಸಿ ಕಲೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.

ಈ ವೇಳೆ ಪತಿ ರಾಜ್ ಕುಂದ್ರ, ತಂಗಿ ಶಮಿತಾ ಶೆಟ್ಟಿ, ಕುಟುಂಬ ವರ್ಗದವರು, ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ ಉಪಸ್ಥಿತರಿದ್ದರು.