More

    VIDEO| ಖ್ಯಾತ ಗಾಯಕಿ ಕೈಯಿಂದ ಮೈಕ್ ಕಸಿದುಕೊಂಡ ನಿರೂಪಕಿ; ಮುಂದೇನಾಯ್ತು?

    ಪಟ್ನಾ: ಕಾರ್ಯಕ್ರಮದಲ್ಲಿ ಗಾಯಕಿ ಒಬ್ಬರು ಹಾಡುವ ವೇಳೆ ನಿರೂಪಕರು ಅಡ್ಡಿಪಡಿಸಿ ಮೈಕ್​ ಕಿತ್ತುಕೊಳ್ಳಲು ಮುಂದಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಗೋಪಾಲ್​ಗಂಜ್​ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಥಾವೆ ಉತ್ಸವ 2023ರಲ್ಲಿ ಘಟನೆ ನಡೆದಿದ್ದು ಸಾಕಷ್ಟು ಟೀಕೆ ವ್ಯಕ್ತವಾಗಿದೆ.

    ಇದು ಸರಿಯಲ್ಲ

    ಕಾರ್ಯಕ್ರಮದಲ್ಲಿ ಗಾಯಕಿ ಪ್ರಿಯಾಂಕ ಸಿಂಗ್​ ಹಾಡು ಹಾಡುವ ವೇಳೆ ನಿರೂಪಕರು ಸಮಯದ ಅಭಾವ ಇದೆ ಎಂದು ಹೇಳಿ ಅಡಿಪಿಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗಾಯಕಿ ತಮಗೆ ಎರಡು ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡುವಂತೆ ಕೋರಿದರು.

    ಇದಕ್ಕೊಪ್ಪದ ನಿರೂಪಕಿ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಒಬ್ಬರನ್ನು ವೇದಿಕೆ ಮೇಲೆ ಬರುವಂತೆ ಕರೆದರು. ಇದಕ್ಕೆ ತೀವ್ರ ಅಸಮಾಧಾನ ಹಹೊರಹಾಕಿದ ಗಾಯಕಿ ಇದು ಸರಿಯಲ್ಲ ಎಂದು ಹೇಳಿ ಕಣ್ಣೀರಿಟ್ಟಿದ್ಧಾರೆ.

    ಇದನ್ನೂ ಓದಿ: ಲಕ್ಷ್ಮಣ್​​ ಸವದಿ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ ಕಾಂಗ್ರೆಸ್ ಮುಖಂಡನ ಈ ಷರತ್ತು

    ತುಂಬಾ ಕೆಟ್ಟ ಅನುಭವ

    ಅದಾಗ್ಯೂ ಮಾತನಾಡಿದ ಗಾಯಕಿ ಪ್ರಿಯಾಂಕ ತನಗೆ ಹಾಡಲು ಅವಕಾಶ ಇಲ್ಲದೆ ಕುಳಿತಿದ್ದೇನೆ ಎಂದು ಭಾವಿಸಿದ್ದಾರೆ. ಜಿಲ್ಲಾಡಳಿತದ ಅಹ್ವಾನದ ಮೇರೆಗೆ ನಾನು ಬಂದಿದ್ದೇನೆ. ನನಗೆ ಅಪಮಾನ ಮಾಡಿದ್ದಾರೆ ಥಾವೆ ಉತ್ಸವ ತುಂಬಾ ಕೆಟ್ಟ ಅನುಭವವನ್ನು ನೀಡಿದೆ ಎಂದು ಬೇಸರ ಹೊರಹಾಕಿದ್ದಾರೆ.

    ಈ ವೇಳೆ ನಿರೂಪಕಿ ರೂಪಮ್​ ತ್ರಿವಿಕ್ರಮ್​ ಗಾಯಕಿಯ ಕೈಯಿಂದ ಮೈಕ್​ ಕಿತ್ತುಕೊಳ್ಳಲು ಯತ್ನಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

    ಇದು ಸರಿಯಲ್ಲ

    ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ನೆಟ್ಟಿಗರು ಕಾರ್ಯಕ್ರಮದ ಆಯೋಜಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಕಾರ್ಯಕ್ರಮಕ್ಕೆ ಕರೆಸಿ ಕಲಾವಿದರಿಗೆ ಈ ರೀತಿ ಅವಮಾನ ಮಾಡುವುದ ಸರಿಯಲ್ಲ ವೇದಿಕೆಗೆ ತನ್ನದೇ ಆದ ನೀತಿ ನಿಯಮಗಳಿರುತ್ತದೆ ಎಂದು ಸಂಘಟಕರ ವಿರುದ್ಧ ಹೌಹಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts