ನ್ಯೂಸ್

ಕುರಿ ಹೊಲಸು ತಿನ್ನಲ್ಲ, ಕುರುಬ ತಪ್ಪುಮಾಡಲ್ಲ: ಸಿಎಂ ಬೆನ್ನಿಗೆ ನಿಂತ ಈಶ್ವರಾನಂದಪುರಿ ಸ್ವಾಮೀಜಿ!

ಬೆಂಗಳೂರು: ಕುರಿ ಹೊಸಲು ತಿನ್ನಲ್ಲ, ಕುರುಬ ತಪ್ಪುಮಾಡಲ್ಲ. ಯಾವ ಅಕ್ರಮವನ್ನು ಮಾಡದ ಸಿದ್ದರಾಮಯ್ಯ ಅವರ ಪರವಾಗಿ ನಾವೆಲ್ಲರೂ ಇರುತ್ತೇವೆ. ಬೃಹತ್ ಜನಾಂದೋಲನ ರೂಪಿಸುತ್ತೇವೆ ಎಂದು ಹೊಸದುರ್ಗ ಕನಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ದುರುದ್ದೇಶದಿಂದ ಕೇಂದ್ರ ಸರ್ಕಾರದ ಕೈ ಗೊಂಬೆಯಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದು ಖಂಡನೀಯ ಎಂದು ಹೇಳಿದರು.

ಒಂದು ಚುನಾಯಿತ ಸರ್ಕಾರವನ್ನು ಅಭದ್ರಗೊಳಿಸುವ ಹುನ್ನಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಗೌರವ ಅಷ್ಟಕ್ಕೂ ಅಧಿಕಾರದಲ್ಲಿರುವುದು ಹಿಂದುಳಿದ ವರ್ಗದ ಪ್ರಬಲ ಜನನಾಯಕ ಅವರು ದೀನ ದುರ್ಬಲರ ಮಹಿಳೆಯರ ಶೋಷಿತರ ಪರವಾಗಿ ಕೆಲಸಮಾಡುತ್ತಿರುವ ನಾಯಕನ ವರ್ಚಸ್ಸು ಮತ್ತು ಜನಪ್ರಿಯತೆಯನ್ನು ಸಹಿಸಲಾಗದ ಪಟ್ಟಬದ್ರ ಹಿತಾಸಕ್ತಿಗಳು ಮಾಡುತ್ತಿರುವ ಕುತಂತ್ರ ಇದನ್ನ ರಾಜ್ಯದ ಶೋಷಿತ ಸಮುದಾಯ ಸಹಿಸುವುದಿಲ್ಲ ಎಂದಿದ್ದಾರೆ.

ಯಾವ ಅಕ್ರಮವನ್ನೂ ಮಾಡದ ಸಿದ್ದರಾಮಯ್ಯ ಅವರ ಪರವಾಗಿ ನಾವೆಲ್ಲರೂ ಇರುತ್ತೇವೆ. ಮತ್ತು ಬೃಹತ್ ಜನಾಂದೋಲನ ಮಾಡುವುದಾಗಿಯೂ ಎಚ್ಚರಿಕೆ ನೀಡಲು ಬಯಸುತ್ತೇವೆ ಎಂದು ಹೇಳಿದರು.