ನವದೆಹಲಿ: ವಿಚಿತ್ರ, ವಿಲಕ್ಷಣ, ಅಸಹಜವೆನ್ನಿಸುವ ಕೆಲಸಗಳು ಕೆಲವೊಮ್ಮೆ ಭಾಗ್ಯದ ಬಾಗಿಲನ್ನೇ ತೆರೆಯಬಲ್ಲವು ಎಂಬುದಕ್ಕೆ ಇಲ್ಲಿದೆ ಇನ್ನೊಂದು ನಿದರ್ಶನ.
ಅಮೆರಿಕ ಕ್ಯಾಲಿಪೋರ್ನಿಯಾದ ನಿವಾಸಿಯಾಗಿರುವ ಯುವತಿಯೊಬ್ಬಳು ಖಿನ್ನತೆ ಹಾಗೂ ಒತ್ತಡಕ್ಕೆ ಒಳಗಾಗಿದ್ದಳು. ಇದನ್ನು ಮರೆಯಲೆಂದೇ ಆಕೆ ಸಾಮಾಜಿಕ ಜಾಲ ತಾಣಗಳತ್ತ ಆಕರ್ಷಿತಳಾದಳು. ಅದೇ ಅವಳಿಗೆ ಹೊಸ ಉದ್ಯೋಗವನ್ನು ದೊರಕಿಸಿಕೊಟ್ಟಿತು.
ಈ ಮೊದಲು ಆಕೆ ಹೋಟೆಲ್ವೊಂದರಲ್ಲಿ ಪರಿಚಾರಕಿಯಾಗಿ ದಿನಕ್ಕೆ 500-600 ರೂ. ಸಂಪಾದಿಸುತ್ತಿದ್ದಳು. ಈಗ ಈಕೆಯ ತಿಂಗಳ ಆದಾಯ ಬರೋಬ್ಬರಿ 60,000 ಡಾಲರ್ಗಳು. ಅಂದಾಜು 45 ಲಕ್ಷ ರೂಪಾಯಿಗಳು ಅಂದರೆ ದಿನಕ್ಕೆ ಒಂದೂವರೆ ಲಕ್ಷ ರೂ.ಗೂ ಅಧಿಕ ಸಂಪಾದನೆ ಮಾಡುತ್ತಿದ್ದಾಳೆ. ಅಂದಹಾಗೆ ಕ್ಯಾಲಿಫೋರ್ನಿಯಾದಲ್ಲಿ ಮನರಂಜನಾ ಉದ್ದೇಶಕ್ಕೆ ಗಾಂಜಾ ಸೇವನೆಗೆ ಅವಕಾಶವಿದೆ.
ಇಷ್ಟಕ್ಕೂ ಆಕೆಯ ಕೆಲಸವೆಂದರೆ, ಇನ್ಸ್ಟಾಗ್ರಾಂ ನಲ್ಲಿ ಗಾಂಜಾ ಎಳೆಯೋದು. ತನ್ನನ್ನು ಸೀಕೀ ಎಂದು ಕರೆದುಕೊಂಡಿದ್ದಾಳೆ. ಈಕೆಗೆ ಇನ್ಸ್ಟಾಗ್ರಾಂನಲ್ಲಿ 2.38 ಲಕ್ಷ ಫಾಲೋವರ್ಗಳಿದ್ದಾರೆ. ಈ ಜನಪ್ರಿಯತೆಯೇ ಆಕೆಗೆ ಗಳಿಕೆಯ ಮಾರ್ಗವೂ ಆಗಿದೆ. ಅಷ್ಟಕ್ಕೂ ಈಕೆ ಈ ದುಡ್ಡು ಕೊಡ್ತಾ ಇರೋ ಕಂಪನಿ ಹೆಸರು ರಾ (RAW) ರೋಲಿಂಗ್ ಪೇಪರ್ಸ್. ಇದು ಗಾಂಜಾ ಸುರುಳಿ ಸುತ್ತಲು ಬಳಸುವ ಕಾಗದ ತಯಾರಿಸುವ ಕಂಪನಿ. ಈ ಸಂಸ್ಥೆಗೆ ಈಕೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾಳೆ.
ದಿನಕ್ಕೆ ಇಪ್ಪತ್ತು 20 ಜಾಯಿಂಟ್ಸ್ (ಧಮ್ ಎಂದು ಕರೆಯಬಹುದೇನೋ) ಗಾಂಜಾ ಸೇವನೆ ಆಕೆಯನ್ನು ಶಾಂತವಾಗಿಸುತ್ತದೆಯಂತೆ. ಮಾನಸಿಕ ನೆಮ್ಮದಿ ಸಿಗುತ್ತಂತೆ..!
ತಜ್ಞರು ಹೇಳುವ ಪ್ರಕಾರ ಒಂದು ಜಾಯಿಂಟ್ ಗಾಂಜಾ ಸೇದಿದರೆ 20 ಸಿಗರೇಟ್ ಸೇವನೆಗೆ ಸಮ. ಅಂಥದ್ದರಲ್ಲಿ ಈಕೆ ಇಪ್ಪತ್ತು ಜಾಯಿಂಟ್ ಗಾಂಜಾ ಸೇವಿಸಿದರೆ ದಿನಕ್ಕೆ 400 ಸಿಗರೇಟ್ ಸೇವಿಸದಂತಾಯ್ತು....!