ಮುಂಬೈ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಘಟನೆಯನ್ನು ಹೋಲುವ ಘಟನೆಯೊಂದು ಮಹಾನಗರಿ ಮುಂಬೈನಲ್ಲಿ ನಡೆದಿತ್ತು.
ತನ್ನ ಪ್ರೇಮಿಯನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕುಕ್ಕರ್‌ನಲ್ಲಿ ಕುದಿಸಿದ ಆರೋಪದ ಮೇಲೆ ಪ್ರಿಯಕರ ಮನೋಜ್ ಸಾನೆ(56) ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ಧಾರೆ.
ವಿಚಾರಣೆ ವೇಳೆ ಆರೋಪಿಯೂ ತನ್ನ ಪ್ರೇಯಸಿ ಸರಸ್ವತಿ ವೈದ್ಯ(32) ಜೂನ್ 3ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ವಿಚಾರ ಹೊರ ಬಂದರೆ, ಎಲ್ಲಿ ಪೊಲೀಸರು ತನ್ನನ್ನು ಪ್ರಕರಣದಲ್ಲಿ ಸಿಲುಕಿಸುತ್ತಾರೆ ಎಂದು ಭಯಭೀತಗೊಂಡು ಆಕೆಯ ದೇಹವನ್ನು ಮರ ಕಟ್ ಮಾಡುವ ಮೆಷಿನ್ನಿಂದ ತುಂಡು ತುಂಡಾಗಿ ಕತ್ತರಿಸಿದೆ.
ಬಳಿಕ ಆಕೆಯ ದೇಹ ಭಾಗಗಳನ್ನ ಮೊದಲಿಗೆ ಕುಕ್ಕರ್‌ನಲ್ಲಿ ಕುದಿಸಿ ಮಾಂಸ ಹಾಗೂ ಮೂಳೆಯನ್ನು ಬೇರ್ಪಡಿಸಿದೆ. ಬಳಿಕ ಅದನ್ನು ಮಿಕ್ಸಿಯಲ್ಲಿ ರುಬ್ಬಿ ನಾಯಿಗಳಿಗೆ ಬಡಿಸಿದೆ. ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದೆ. ಆದರೆ, ಈ ವಿಚಾರದಲ್ಲಿ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ಧಾರೆ.