ನ್ಯೂಸ್

ಬೀದಿ ಕಾಮಣ್ಣರ ಅಟ್ಟಹಾಸಕ್ಕೆ ಆಹುತಿಯಾದಳು ಯುವತಿ

sspmiracle1982

ಬುಲಂದ್‌ಶಹರ್: ಬೀದಿ ಕಾಮಣ್ಣರು ರಸ್ತೆಯಲ್ಲಿ ಬೆನ್ನಟ್ಟಿ ಚುಡಾಯಿಸಿದ್ದಕ್ಕೆ  ಭಯಭೀತಳಾದ ಯುವತಿ ಬೈಕ್​​ನಿಂದ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಸುದೀಕ್ಷಾ ಭಾಟಿ ಮೃತಪಟ್ಟ ಯುವತಿ. ಆಕೆ 2018 ರಲ್ಲಿ 12 ನೇ ತರಗತಿ ಪರೀಕ್ಷೆಯಲ್ಲಿ ಶೇ 98 ಅಂಕಗಳನ್ನು ಗಳಿಸಿ ವಿದ್ಯಾರ್ಥಿ ವೇತನದ ಸಹಾಯದಿಂದ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ ಪ್ರವೇಶ ಪಡೆದಿದ್ದಳು. ಮೆಸಾಚೂಸೆಟ್ಸ್‌ನ ಬಾಬ್ಸನ್ ಕಾಲೇಜಿನಲ್ಲಿ ಓದುತ್ತಿದ್ದಳು.

COVID-19 ನಿಂದಾಗಿ ಜೂನ್‌ನಲ್ಲಿ ಭಾರತಕ್ಕೆ ಬಂದಿದ್ದ ಸುದೀಕ್ಷಾ ಆಗಸ್ಟ್‌ನಲ್ಲಿ ವಾಪಸ್ ಅಮೆರಿಕಕ್ಕೆ ತೆರಳುವ ತಯಾರಿಯಲ್ಲಿದ್ದಳು .

ಏತನ್ಮಧ್ಯೆ ಸೋಮವಾರ ಆಕೆ ಕೆಲವು ಅಧ್ಯಯನ ಸಾಮಗ್ರಿಗಳನ್ನು ತರಲು ಬೈಕ್​​ನಲ್ಲಿ ಚಿಕ್ಕಪ್ಪನೊಂದಿಗೆ ಸಂಬಂಧಿಕರ ಮನೆಗೆ ಹೋಗಿದ್ದಳು.

ದಾರಿಯಲ್ಲಿ, ಬೈಕ್​ನಲ್ಲಿ ಅವರಿಗೆ ಎದುರಾದ ಗೂಂಡಾಗಳು ಜೋರಾಗಿ ರೈಡ್ ಮಾಡು ಕಿರುಚುತ್ತ ಆಕೆಯನ್ನು ಚುಡಾಯಿಸುತ್ತಿದ್ದರು.

ಬುಲಂದಶಹರ್ ದಾಟಿ, ಸಂಬಂಧಿಕರಿರುವ ಹಳ್ಳಿಯನ್ನು ಪ್ರವೇಶಿಸಿದಾಗ ಒಂದು ಬೈಕ್ ಹಲವು ಬಾರಿ ನಮ್ಮನ್ನು ಓವರ್​ ಟೇಕ್ ಮಾಡಿತು. ಅದರಲ್ಲೊಬ್ಬ ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾದ. ನಾನು ವಾಹನವನ್ನು ನಿಧಾನಗತಿಗೆ ತಂದೆ. ಆದರೆ ಅವರು ಜೋರಾಗಿ ಬೈಕ್​ಗೆ ಗುದ್ದಿದರು. ಇದರಿಂದ ನಾವಿಬ್ಬರೂ ಕೆಳಗೆ ಬಿದ್ದೆವು. ಆಕೆಗೆ ತಲೆಗೆ ಗಾಯವಾಗಿದೆ.

ನಮಗೆ ಅಪಘಾತವಾದ ನಂತರ ಅವರು ಪರಾರಿಯಾದರು. ಅವರಾರೆಂದು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಆಕೆಯ ಚಿಕ್ಕಪ್ಪ ಸತ್ತೇಂದ್ರ ಭಾಟಿ ತಿಳಿಸಿದ್ದಾರೆ.

ಇದನ್ನು ಹಲ್ಲೆ ಪ್ರಕರಣ ಎಂದು ಗುರುತಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ಬಗ್ಗೆ ಔರಂಗಾಬಾದ್ ಪೊಲೀಸ್ ಠಾಣೆಗೆ ಕರೆ ಬಂದಿದ್ದು, ಪೊಲೀಸ್ ತಂಡ ಸ್ಥಳಕ್ಕೆ ತಲುಪಿದೆ. ಸುದೀಕ್ಷಾ ತನ್ನ ಚಿಕ್ಕಪ್ಪನೊಂದಿಗೆ ಸಂಬಂಧಿಕರ ಮನೆಗೆ ಹೋಗುತ್ತಿದ್ದಳೆಂದು ಎಂದು ನಮಗೆ ತಿಳಿದುಬಂದಿದೆ. ಆದರೆ ರಾಯಲ್ ಎನ್‌ಫೀಲ್ಡ್ ಬುಲೆಟ್ ಮೊಟರ್ ಸೈಕಲ್ ವಿರುದ್ಧ ದಿಕ್ಕಿನಿಂದ ಬರುತ್ತಿತ್ತು ಮತ್ತು ಅಪಘಾತಕ್ಕೆ ಕಾರಣವಾದ ಸಂಚಾರ ದಟ್ಟಣೆಯಿಂದಾಗಿ ಇದ್ದಕ್ಕಿದ್ದಂತೆ ಅವರ ಬೈಕ್ ಬಳಿ ನಿಂತಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬೈಕ್​ಗೆ ಗುದ್ದಿದ ನಂತರ ಸುದೀಕ್ಷಾ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಅಪಘಾತದ ಸಮಯದಲ್ಲಿ, ಹುಡುಗಿಯ ಸಂಬಂಧಿ ಅಥವಾ ಯಾವುದೇ ಪ್ರತ್ಯಕ್ಷದರ್ಶಿ ಕಿರುಕುಳದ ಬಗ್ಗೆ ತಿಳಿಸಿಲ್ಲ. ನಾವು ಪ್ರಕರಣವನ್ನು ಮತ್ತಷ್ಟು ತನಿಖೆ ಮಾಡುತ್ತಿದ್ದೇವೆ ಎಂದು ಬುಲಂದ್‌ಶಹರ್ ಪೊಲೀಸ್ ಅಧೀಕ್ಷಕ (ಎಸ್‌ಪಿ) ಅತುಲ್ ಶ್ರೀವಾಸ್ತವ ಹೇಳಿದ್ದಾರೆ.

ಅಪಘಾತದ ಸಮಯದಲ್ಲಿ ಸುದೀಕ್ಷಾ ತನ್ನ ಸೋದರಸಂಬಂಧಿಯೊಂದಿಗೆ ಇದ್ದಳು ಎಂದು ಪೊಲೀಸರು ಹೇಳುತ್ತಾರೆ.ಕಿರುಕುಳ ನೀಡಿದ ಯಾರೂ ಏನೂ ಹೇಳಲಿಲ್ಲ ಎನ್ನಲಾಗಿದೆ.