ನವದೆಹಲಿ: ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ನಿಧನರಾದರು ಎಂಬ ಸುಳ್ಳು ಸುದ್ದಿಯನ್ನು ನಂಬಿದ ಕಾಂಗ್ರೆಸ್ ಸಂಸದ ಶಶಿ ತರೂರ್, ಸುಮಿತ್ರಾ ಮಹಾಜನ್ ಕುಟುಂಬಕ್ಕೆ ಸಾಂತ್ವಾನದ ಟ್ವೀಟ್ ಮಾಡುವ ಮೂಲಕ ಪ್ರಮಾದವೊಂದನ್ನು ಎಸಗಿ, ಬಳಿಕ ತಪ್ಪಿನ ಅರಿವಾಗಿ, ಟ್ವೀಟ್ ಡಿಲೀಟ್ ಮಾಡುವುದರೊಂದಿಗೆ ಕ್ಷಮೆಯಾಚಿಸಿದ ಘಟನೆ ಗುರುವಾರ (ಏಪ್ರಿಲ್ 22) ನಡೆದಿದೆ.
ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ನಿಧನರಾದರು ಇದೀಗ ತಾನೇ ಕೇಳಲ್ಪಟ್ಟೆ. ಮಾಸ್ಕೋದಲ್ಲಿ ನಡೆದ ಬ್ರಿಕ್ಸ್ ಶೃಂಗದಲ್ಲಿ ಸಂಸದೀಯ ನಿಯೋಗವನ್ನು ಮುನ್ನಡೆಸಲು ಸುಮಿತ್ರಾ ಮಹಾಜನ್ ಮತ್ತು ದಿವಂಗತ ಸುಷ್ಮಾ ಸ್ವರಾಜ್ ಅವರು ನನ್ನನ್ನು ಕೇಳಿದಾಗ ಅವರೊಂದಿಗೆ ನಡೆದ ಹಲವು ಧನಾತ್ಮಕ ಸಂವಹನ ಬಗ್ಗೆ ನನಗೆ ನೆನಪಿದೆ. ಅವರನ್ನು ಕಳೆದುಕೊಂಡ ಕುಟುಂಬದಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆಂದು ಗುರುವಾರ ರಾತ್ರಿ 11.16ಕ್ಕೆ ಕೇರಳದ ತಿರುವನಂತಪುರಂ ಸಂಸದರಾಗಿರುವ ತರೂರ್ ಟ್ವೀಟ್ ಮಾಡಿದ್ದರು.
ಯಾವಾಗ ಸಾಮಾಜಿಕ ಜಾಲತಾಣದಲ್ಲಿ ಸುಮಿತ್ರಾ ಮಹಾಜನ್ಗೆ ಏನು ಸಮಸ್ಯೆ ಆಗಿಲ್ಲ. ಅವರು ಆರೋಗ್ಯವಾಗಿದ್ದಾರೆ ಎಂಬ ಮಾತುಗಳು ಕೇಳಿಬಂತೋ, ಇದು ತರೂರ್ ಗಮನಕ್ಕೆ ಬಂದು ಟ್ವೀಟ್ ಡಿಲೀಟ್ ಮಾಡಿ ಕ್ಷಮೆಯಾಚಿಸಿದ್ದಾರೆ.
ಸುಮಿತ್ರಾ ಮಹಾಜನ್ ಅವರ ನಿಧನದ ಬಗ್ಗೆ ತಿಳಿಸುವ ವಿಶ್ವಾಸಾರ್ಹ ಮೂಲವೆಂದು ಭಾವಿಸಿದ ಸಂದೇಶವನ್ನು ಸ್ವೀಕರಿಸಿದೆ. ಅವರು ಚೆನ್ನಾಗಿದ್ದಾರೆಂದು ತಿಳಿದು ನಿರಾಳವಾಗಿದೆ. ಟ್ವೀಟ್ ಅನ್ನು ಹಿಂತೆಗೆದುಕೊಳ್ಳಲು ಸಂತೋಷವಾಗಿದೆ. ಯಾರಾದರೂ ಇಂತಹ ಸುದ್ದಿಗಳನ್ನು ಮಾಡುತ್ತಾರೆಯೇ ಎಂದು ತರೂರ್ ದಿಗಿಲುಗೊಂಡರು.
ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಸಹ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿ, ಮಹಾಜನ್ ಅವರು ಖಂಡಿತವಾಗಿ ಆರೋಗ್ಯವಾಗಿದ್ದಾರೆಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ತರೂರ್, ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಕೈಲಾಶ್ ಅವರಿಗೆ ಧನ್ಯವಾದಗಳು ಎಂದಿದ್ದಾರೆ.
ಅಂದಹಾಗೆ 78 ವರ್ಷದ ಸುಮಿತ್ರಾ ಮಹಾಜನ್, ಮಧ್ಯಪ್ರದೇಶದ ಇಂದೋರ್ ಕ್ಷೇತ್ರವನ್ನು 1989 ರಿಂದ 2019ರವರೆಗೆ ಪ್ರತಿನಿಧಿಸಿದರು. ಹೆಚ್ಚು ಕಾಲ ಸೇವೆ ಸಲ್ಲಿಸಿದ ಮಹಿಳಾ ಸಂಸತ್ ಸದಸ್ಯೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಲ್ಲದೆ, 2014 ರಿಂದ 2019 ರವರೆಗೆ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. (ಏಜೆನ್ಸೀಸ್)