More

    ಪಶ್ಚಿಮ ಬಂಗಾಳ ಚುನಾವಣಾ ಪ್ರವಾಸವನ್ನು ರದ್ದು ಮಾಡಿದ ಪ್ರಧಾನಿ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ನಡೆಯಲಿದ್ದ ತಮ್ಮ ಪಶ್ಚಿಮ ಬಂಗಾಳ ಚುನಾವಣಾ ಸಮಾವೇಶಗಳಲ್ಲಿ ಭಾಗವಹಿಸುವುದನ್ನು ರದ್ದು ಮಾಡಿದ್ದಾರೆ.

    ಈ ಕುರಿತು ಇಂದು ಟ್ವೀಟ್ ಮಾಡಿರುವ ಅವರು, ನಾಳೆ ದೇಶದಲ್ಲಿ ಕೋವಿಡ್19 ಸ್ಥಿತಿಗತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆ ಆಯೋಜಿಸಿದ್ದೇನೆ. ಇದರಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಪಶ್ಚಿಮ ಬಂಗಾಳ ಪ್ರವಾಸವನ್ನು ರದ್ದು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

    ಇತ್ತೀಚೆಗಷ್ಟೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಸಹ ಪಶ್ಚಿಮ ಬಂಗಾಳ ಚುಣಾವಣಾ ಸಮಾವೇಶಗಳಿಂದ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದ್ದರು. ಆದರೆ, ಅಮಿತ ಶಾ, ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಮುಖಂಡರು ಕರೊನಾ ಪರಿಸ್ಥಿತಿ ಕಡೆಗಣಿಸಿ ಬೃಹತ್ ಚುನಾವಣಾ ಸಮಾವೇಶಗಳನ್ನು ಆಯೋಜಿಸುತ್ತಿದ್ದಾರೆ.

    ಕಳೆದ ಮಂಗಳವಾರವಷ್ಟೇ ರಾತ್ರಿ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಕರೊನಾ ಎದುರಿಸುವ ಬಗ್ಗೆ ಮಾತನಾಡಿದ್ದರು. ಲಾಕ್​ಡೌನ್ ಜಾರಿ ಮಾಡುವುದಿಲ್ಲ ಎಂದಿದ್ದ ಪ್ರಧಾನಿ ಇದೀಗ ಲಾಕ್​ಡೌನ್ ಹೇರುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ ಎಂಬುದಾಗಿ ವರದಿಗಳು ಬಂದಿವೆ. ಹೀಗಾಗಿಯೇ ನಾಳೆ ಉನ್ನತ ಮಟ್ಟದ ಸಭೆಯನ್ನು ಮೋದಿ ಕರೆದಿದ್ದಾರೆ ಎನ್ನಲಾಗಿದೆ.

    ಒಂದೇ ಕುಟುಂಬದ ಮೂವರು ಸದಸ್ಯರು ಕರೊನಾಕ್ಕೆ ಬಲಿ! ಆಘಾತ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಸೊಸೆ!

    ಕರ್ಫ್ಯೂ ನಡುವೆಯೂ ಪ್ರೇಯಸಿಯನ್ನು ಭೇಟಿಯಾಗುತ್ತೇನೆ ಎಂದವನಿಗೆ ಮುಂಬೈ ಪೊಲೀಸ್ ಕೊಟ್ಟ ಉತ್ತರ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts