ನ್ಯೂಸ್

ಹಲವು ದಿನಗಳ ಇಳಿಕೆ ಬಳಿಕ ಚೇತರಿಸಿಕೊಂಡ ಷೇರುಪೇಟೆ

ಮೋಹನ್​ ಶೆಟ್ಟಿ
  • ಸೆನ್ಸೆಕ್ಸ್ 602, ನಿಫ್ಟಿ 158 ಅಂಶ ಏರಿಕೆ

ಮುಂಬೈ: ಕಳೆದ ಹಲವು ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಷೇರುಪೇಟೆ ವಾರದ ವಹಿವಾಟಿನ ಮೊದಲ ದಿನವಾದ ಸೋಮವಾರದಂದು ಚೇತರಿಸಿಕೊಂಡಿದೆ. ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್​ಇ) ಸೆನ್ಸೆಕ್ಸ್ 602 ಅಂಶ ಏರಿಕೆ ದಾಖಲಿಸಿದ್ದು, (0.76%) 80,005ಕ್ಕೆ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್​ಎಸ್​ಇ) ನಿಫ್ಟಿ ಕೂಡ 158 ಅಂಶಗಳ ಏರಿಕೆ ದಾಖಲಿಸುವ ಮೂಲಕ (0.65%) 24,339ಕ್ಕೆ ದಿನದ ವಹಿವಾಟು ಸ್ಥಗಿತಗೊಳಿಸಿತು.

ಬಿಎಸ್​ಇ ಮಿಡ್​ಕ್ಯಾಪ್ 312 ಅಂಶ ಏರಿಕೆ ಕಂಡು (0.69%) 45,765ಕ್ಕೆ ತಲುಪಿತು. ಬಿಎಸ್​ಇ ಸ್ಮಾಲ್​ಕ್ಯಾಪ್ 579 ಅಂಶ ಏರಿಕೆ ದಾಖಲಿಸಿ (1.11%) 52,915ಕ್ಕೆ ಸ್ಥಿರಗೊಂಡಿತು. ಸೆನ್ಸೆಕ್ಸ್​ನ 30 ಷೇರುಗಳಲ್ಲಿ 25 ಲಾಭ ಕಂಡರೆ, 5 ನಷ್ಟ ಅನುಭವಿಸಿದವು. ನಿಫ್ಟಿಯ 50 ಷೇರುಗಳಲ್ಲಿ 36 ಲಾಭ ಹಾಗೂ 14 ನಷ್ಟ ಕಂಡವು. ಸರ್ಕಾರಿ ಬ್ಯಾಂಕುಗಳ ಷೇರುಗಳು ಹೆಚ್ಚು ಏರಿಕೆ ದಾಖಲಿಸಿದವು.

ನಿಫ್ಟಿಯಲ್ಲಿ ಶ್ರೀರಾಮ ಫೈನಾನ್ಸ್ (5.35%), ಅದಾನಿ ಎಂಟರ್​ಪ್ರೖೆಸಸ್ (4.07%) ಹಾಗೂ ಐಸಿಐಸಿಐ ಬ್ಯಾಂಕ್ (3.10%) ಷೇರುಗಳು ಉತ್ತಮ ಲಾಭ ಮಾಡಿದವು. ಆದರೆ, ಕೋಲ್ ಇಂಡಿಯಾ (3.76%), ಬಜಾಜ್ ಅಟೋ (2.07%) ಹಾಗೂ ಎಕ್ಸಿಸ್ ಬ್ಯಾಂಕ್ (1.29%) ಹೆಚ್ಚು ನಷ್ಟ ಅನುಭವಿಸಿದವು.

ಎನ್​ಎಸ್​ಇ ಅಂಕಿಅಂಶಗಳ ಪ್ರಕಾರ ಅ.25ರಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು 3,036 ಕೋಟಿ ರೂ.ಗಳ ಷೇರು ಮಾರಾಟ ಮಾಡಿದರು. ದೇಶೀಯ ಸಾಂಸ್ಥಿಕ ಹೂಡಿಕೆದಾರರು 4,159 ಕೋಟಿ ರೂ.ಗಳ ಷೇರು ಖರೀದಿಸಿದರು.