ನ್ಯೂಸ್

Share Market ; 5ನೇ ದಿನವೂ ಮುಂದುವರೆದ ಗೂಳಿ ಓಟ: ಇಂದಿನ ಲಾಭ-ನಷ್ಟಗಳಿಸಿದ ಷೇರುಗಳು ಪಟ್ಟಿ ಇಲ್ಲಿದೆ..

Share Market : ಕಳೆದ ಕೆಲ ದಿನಗಳಿಂದೆ ಭಾರೀ ಕುಸಿತದ ಮೂಲಕ ಅತಂಕ ಸೃಷ್ಠಿಯಾಗಿದ್ದ ದೇಶಿಯ ಷೇರುಮಾರುಕಟ್ಟೆ ಕಳೆದ 5ನೇ ದಿನ ಶುಕ್ರವಾರ ಕೂಡ ಭಾರೀ ಚೇತರಿಕೆ ಕಾಣುವ ಮೂಲಕ ಗೂಳಿ ಓಟ ಮುಂದುವರೆದಿದೆ.

ಬಿಇಎಸ್​ ಸೆನ್ಸೆಕ್ಸ್​ ಷೇರು ಸೂಚ್ಯಂಕವು ಶುಕ್ರವಾರ ಏರಿಳಿತಗೊಂಡು ಅಂತಿಮವಾಗಿ 0.73% ರಷ್ಟು ಹೆಚ್ಚಾಗಿ 76,905. 51 ಏರಿಕೆ ಕಾಣುವ ಮೂಲಕ ದಿನದ ಮುಕ್ತಾಯ ಕಂಡಿದೆ. ಇದು ಅದರ ಆರಂಭಿಕ ಬೆಲೆಗಿಂತ 557.45 ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ. ಇನ್ನು ಎನ್​ಇಎಸ್​ ನಿಫ್ಟಿ ಸಹ ಶೇ. 0.69 % ರಷ್ಟು ಸೂಚ್ಯಂಕ ಏರಿಕೆ ಕಂಡಿದೆ. ನಿಫ್ಟಿ 159.75 ಪಾಯಿಂಟ್ಸ್​ನೊಂದಿದೆ 22,940.7ರ ಏರಿಕೆ ಮಟ್ಟವನ್ನು ತಲುಪಿದೆ.

ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಏರಿಕೆ ಪ್ರವೃತ್ತಿಯ ನಡುವೆ ವ್ಯಾಪಕ ಖರೀದಿಯಿಂದ ದೇಶದ ಷೇರು ಸೂಚ್ಯಂಕಗಳು ಏರಿಕೆ ದಾಖಲಿಸಿವೆ.

ಶುಕ್ರವಾರ  ಲಾಭ-ನಷ್ಟ ಅನುಭವಿಸಿದ ಷೇರುಗಳ ಪಟ್ಟಿ ಇಲ್ಲಿದೆ..

ಸೆನ್ಸೆಕ್ಸ್

ಲಾಭದಾಯಕ ಷೇರು: ಎನ್‌ಟಿಪಿಸಿ ಶೇ.3.09, ಬಜಾಜ್ ಫೈನಾನ್ಸ್ ಶೇ.2.62 ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಶೇ.2.14 ರಷ್ಟು ಏರಿಕೆ ಕಂಡಿವೆ.

ನಷ್ಟದ ಷೇರು: ಮಹೀಂದ್ರಾ, ಟಾಟಾ ಸ್ಟೀಲ್, ಇನ್ಫೋಸಿಸ್, ಟೈಟಾನ್ ಮತ್ತು ಬಜಾಜ್ ಫಿನ್‌ಸರ್ವ್ ಷೇರುಗಳು ಶೇ. 1 ಕ್ಕಿಂತ ಹೆಚ್ಚು ಕುಸಿದವು.

ನಿಫ್ಟಿ

ಲಾಭದಾಯಕ ಷೇರು: ಬಿಪಿಸಿಎಲ್‌, ಒಎನ್‌ಜಿಸಿ, ಎಸ್‌ಬಿಐ ಲೈಫ್‌ ಇನ್ಷುರೆನ್ಸ್‌, ಎನ್‌ಟಿಪಿಸಿ, ಬಜಾಜ್ ಫೈನಾನ್ಸ್‌ ನಿಫ್ಟಿಯ ಟಾಪ್ ಗೇನರ್‌ಗಳಾಗಿವೆ.

ನಷ್ಟದ ಷೇರು: ಇದೇ ವೇಳೆಯಲ್ಲಿ ಹಿಂಡಾಲ್ಕೊ ಇಂಡಸ್ಟ್ರೀಸ್‌, ವಿಪ್ರೋ, ಟ್ರೆಂಟ್‌, ಇನ್ಫೋಸಿಸ್‌, ಟಾಟಾ ಸ್ಟೀಲ್‌ ಕುಸಿತ ಸಾಧಿಸಿವೆ.(ಏಜೆನ್ಸೀಸ್​)