ಮುಂಬೈ: ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು ಷೇರುದಾರರಿಗೆ ಇತ್ತೀಚಿನ ದಿನಗಳಲ್ಲಿ ಉತ್ತಮ ಆದಾಯವನ್ನು ನೀಡುತ್ತಿವೆ. ಇಂತಹವುಗಳಲ್ಲಿ ಪವರ್ ಗ್ರಿಡ್ ಕಾರ್ಪೊರೇಷನ್ ಸಹ ಒಂದು. ಕಳೆದ ಐದು ವರ್ಷಗಳಲ್ಲಿ ಇದರ ಷೇರುಗಳು ಉತ್ತಮ ಲಾಭಾಂಶ ನೀಡಿದೆ.
ಇದನ್ನೂ ಓದಿ: ‘ಮಿಸ್ಟರ್ ಬಚ್ಚನ್’: ಲೆಹೆಂಗಾದೊಳಗೆ ಕೈ ಹಾಕಿ ಸ್ಟೆಪ್ಸ್.. ಟ್ರೋಲಿಂಗ್ ಕುರಿತು ನಿರ್ದೇಶಕ ಹೇಳಿದ್ದೇನು ಗೊತ್ತಾ?
ಪವರ್ ಗ್ರಿಡ್ ಕಾರ್ಪೊರೇಷನ್ ಐದು ವರ್ಷಗಳಲ್ಲಿ ಶೇ.180ರಷ್ಟು ಲಾಭದೊಂದಿಗೆ ಸ್ಥಿರವಾದ ಆದಾಯವನ್ನು ನೀಡಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಷೇರು ಶೇ.79 ರಷ್ಟು ಲಾಭವನ್ನು ನೀಡಿದೆ. ಕಳೆದ ವರ್ಷ ಆಗಸ್ಟ್ 16 ರಂದು 186 ರೂ.ಇದ್ದ ಷೇರಿನ ಬೆಲೆ ಸದ್ಯ 333 ರೂ.ಗೆ ಏರಿಕೆಯಾಗಿದೆ. ಈ ಕಂಪನಿಯಲ್ಲಿ ಒಂದು ವರ್ಷದ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದವರಿಗೆ ಕನಿಷ್ಠ 2 ಲಕ್ಷ ರೂಪಾಯಿ ಸಿಗುತ್ತಿದೆ.
ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಕಂಪನಿಯನ್ನು 1983 ರಲ್ಲಿ ಸ್ಥಾಪಿಸಲಾಯಿತು. ಇದು ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದ ಒಡೆತನದ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿದೆ. ಬೃಹತ್ ವಿದ್ಯುತ್ ಪ್ರಸರಣ ಕಾರ್ಯಕ್ರಮವನ್ನು ಮುಖ್ಯವಾಗಿ ಈ ನಿಗಮವು ನಡೆಸುತ್ತಿದೆ. ಇದರ ಕೇಂದ್ರ ಕಚೇರಿ ಗುರುಗಾಂವ್ನಲ್ಲಿದೆ. ದೇಶದಲ್ಲಿ ಪವರ್ ಗ್ರಿಡ್ ಕಾರ್ಪೊರೇಷನ್ ಉತ್ಪಾದಿಸುವ ಶೇಕಡಾ 50 ಕ್ಕಿಂತ ಹೆಚ್ಚು ವಿದ್ಯುತ್ ಕಾರ್ಪೊರೇಷನ್ ನಿರ್ವಹಿಸುವ ನೆಟ್‌ವರ್ಕ್ ಮೂಲಕ ರವಾನೆಯಾಗುತ್ತದೆ.
ಪ್ರಸ್ತುತ ಈ ಕಂಪನಿ 2 ಲಕ್ಷ 50 ಸಾವಿರ ಕೋಟಿ ಆಸ್ತಿ ಹೊಂದಿದೆ. ಅಲ್ಲದೆ ಈ ಕಂಪನಿಯು ಷೇರು ಮಾರುಕಟ್ಟೆಯಲ್ಲಿ 87 ಸಾವಿರದ 145 ಕೋಟಿ ಷೇರುಗಳನ್ನು ಹೊಂದಿದೆ. ಈ ಕಂಪನಿಯಲ್ಲಿ ಸುಮಾರು 25 ಸಾವಿರ ಜನರು ಕೆಲಸ ಮಾಡುತ್ತಿದ್ದಾರೆ.