ನ್ಯೂಸ್

VIDEO|ದಟ್ಟ ಅರಣ್ಯದ ಮಧ್ಯೆ ಹಾದು ಹೋಗಿರುವ ರಸ್ತೆಯನ್ನು ಆನೆಗಳ ಹಿಂಡು ಹೇಗೆ ದಾಟುತ್ತದೆ ವಿಡಿಯೋ ನೋಡಿ

ಆನೆಗಳ ಹಿಂಡು ದಟ್ಟ ಅರಣ್ಯದ ಮಧ್ಯೆ ರಸ್ತೆ ದಾಟುವ ವಿಡಿಯೋವನ್ನು ಭಾರತೀಯ ಅರಣ್ಯ ಅಧಿಕಾರಿಯೊಬ್ಬರು ಟ್ವಿಟರ್​ನಲ್ಲಿ ಅಪ್​ಲೋಡ್​ ಮಾಡಿದ್ದಾರೆ.

ಐಎಫ್​ಎಸ್​ ಅಧಿಕಾರಿ ಪರ್ವೀನ್​ ಕಸ್ವಾನ್​ ಅವರು 29 ಸೆಕೆಂಡ್​ಗಳ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ಅಪ್​ಲೋಡ್​ ಆದ ಕೆಲವೆ ತಾಸುಗಳಲ್ಲಿ ಹಲವು ಮಂದಿ ವಿಡಿಯೋ ಹಂಚಿಕೊಂಡಿದ್ದಾರೆ. ನೂರಾರು ಮಂದಿ ವೀಕ್ಷಣೆ ಮಾಡಿದ್ದಾರೆ.

ದಟ್ಟ ಅರಣ್ಯದ ಮಧ್ಯೆ ಹಾದು ಹೋಗುವ ರಸ್ತೆಯಲ್ಲಿ ಆನೆಗಳ ಹಿಂಡು ಸಂಚರಿಸುತ್ತದೆ. ಆನೆಗಳು ತೆರಳುವವರೆಗೂ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ಅವುಗಳು ತೆರಳುವುದನ್ನು ನೋಡುತ್ತಿರುತ್ತಾರೆ.

ಆನೆಗಳ ಚಲನವಲನದ ಮೇಲೆ ನಿಗಾ ಇರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ರೆಡಿಯೋ ಕಾಲರ್​ ಅಳವಡಿಸಿರುತ್ತಾರೆ. ಇದರ ಮೂಲಕ ಅವುಗಳ ನಡೆಯನ್ನು ಪತ್ತೆ ಹಚ್ಚುತ್ತಾರೆ. ಆನೆಗಳು ಅಪಾಯದಲ್ಲಿ ಸಿಲುಕಿದ್ದಾಗ ಕೂಡ ಇದು ನೆರವಿಗೆ ಬರುತ್ತದೆ. (ಏಜೆನ್ಸೀಸ್​)