More

    ಜೀವರಕ್ಷಕ ಔಷಧಿಗಳು ಮೊದಲು ಭಾರತೀಯರಿಗೆ ಮಾತ್ರ ದೊರೆಯಬೇಕು; ಆನಂತರ ಇತರೆ ರಾಷ್ಟ್ರಗಳಿಗೆ ನೆರವಾಗಲಿ: ರಾಹುಲ್​ ಗಾಂಧಿ

    ನವದೆಹಲಿ: ಜೀವ ರಕ್ಷಕ ಔಷಧಿಗಳು ಮೊದಲು ಭಾರತೀಯರಿಗೆ ಮಾತ್ರ ದೊರೆಯಬೇಕು. ಆ ನಂತರ ಅವಶ್ಯವಿರುವ ಇತರೆ ರಾಷ್ಟ್ರಗಳಿಗೆ ಸರ್ಕಾರ ನೆರವು ನೀಡಲಿ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ತಿಳಿಸಿದರು.

    ಮಲೇರಿಯಾ ನಿರೋಧಕ ಹೈಡ್ರೋಕ್ಸಿಕ್ಲೋರೋಕ್ವೀನ್​ ಔಷಧವು ಕೋವಿಡ್​ 19 ಸೋಂಕಿಗೆ ಪರಿಹಾರ ಒದಗಿಸುತ್ತದೆ ಎಂದು ಇತ್ತೀಚಿನ ಸಂಶೋಧನೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಇತ್ತೀಷೆಗಷ್ಟೇ ಉಲ್ಲೇಖಿಸಿದ್ದರು. ಇದರ ನಡುವೆಯೇ ಭಾರತ ಹೈಡ್ರೋಕ್ಸಿಕ್ಲೋರೋಕ್ವೀನ್​ ರಫ್ತು ಮಾಡುವುದನ್ನು ನಿಷೇಧಿಸಿತು. ಇದರಿಂದ ನಿರಾಶೆ ಗೊಂಡ ಟ್ರಂಪ್​, ಹೈಡ್ರೋಕ್ಸಿಕ್ಲೋರೋಕ್ವೀನ್​ ರಫ್ತು ಮಾಡದಿದ್ದರೆ, ಭಾರತದ ವಿರುದ್ಧ ಪ್ರತಿಕಾರದ ಮಾತುಗಳನ್ನು ಆಡಿದ್ದಾರೆ.

    ಈ ಬಗ್ಗೆ ಟ್ವೀಟ್​ ಮಾಡಿರುವ ರಾಹುಲ್​ ಗಾಂಧಿ ಸ್ನೇಹವು ಪ್ರತೀಕಾರದ ಬಗ್ಗೆ ಅಲ್ಲ. ಸಂಕಷ್ಟದ ಸಮಯದಲ್ಲಿ ಭಾರತ ಇತರೆ ರಾಷ್ಟ್ರಗಳಿಗೆ ಸಹಾಯ ಮಾಡಲಿ. ಆದರೆ, ಜೀವರಕ್ಷಕ ಔಷಧಗಳು ಮೊದಲು ಖಂಡಿತವಾಗಿ ಭಾರತೀಯರಿಗೆ ಹೆಚ್ಚಿನ ಪ್ರಮಾಣದಲ್ಲಿ ದೊರಕಬೇಕು ಎಂದು ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ.

    ವಿಶ್ವದ ಬಹುತೇಕ ಜೆನರಿಕ್​ ಔಷಧಗಳಲ್ಲಿ ಕಾಲು ಭಾಗಕ್ಕಿಂತ ಹೆಚ್ಚಿನ ಪ್ರಮಾಣವನ್ನು ಭಾರತವೇ ಪೂರೈಸುತ್ತದೆ. ಹೈಡ್ರೋಕ್ಸಿಕ್ಲೋರೋಕ್ವೀನ್​ ಸೇರಿದಂತೆ ಸುಮಾರು 26 ಔಷಧೀಯ ಪದಾರ್ಥಗಳ ರಫ್ತನ್ನು ಭಾರತ ಕಳೆದ ತಿಂಗಳು ನಿಷೇಧಿಸಿತು. ದೇಶಿ ಉಪಯೋಗಕ್ಕೆ ಬೇಕಾಗಿದ್ದರಿಂದ ಈ ನಿರ್ಧಾರವನ್ನು ಕೈಗೊಂಡಿದೆ.

    ಆದರೆ, ಇದರಿಂದ ನಿರಾಶೆಗೊಂಡಿರುವ ಟ್ರಂಪ್​ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಪಿಎಂ ಮೋದಿ ಜತೆ ಭಾನುವಾರ ಬೆಳಗ್ಗೆ ಮಾತನಾಡಿದೆ. ಅದೇ ರೀತಿ ನಮ್ಮ ಬೇಡಿಕೆಯ ಪೂರೈಕೆಯನ್ನು (ಹೈಡ್ರೋಕ್ಸಿಕ್ಲೋರೋಕ್ವಿನ್​)ಯನ್ನು ನೀವು ಒದಗಿಸಿದರೆ ನಾವು ಅದನ್ನು ಮೆಚ್ಚುತ್ತೇವೆ. ಒಂದೊಮ್ಮೆ ಅವರು ಅದನ್ನು ಕಳುಹಿಸಲು ನಿರಾಕರಿಸಿದರೆ ಪರವಾಗಿಲ್ಲ. ಆದರೆ, ಸಹಜವಾಗಿಯೇ ಪ್ರತೀಕಾರವೂ ಇರಬಹುದು. ಯಾಕೆ ಇರಬಾರದು ಎಂದು ಪ್ರಧಾನಿ ಮೋದಿಯವರಿಗೆ ಸವಾಲನ್ನು ಎಸೆದಿದ್ದಾರೆ ಟ್ರಂಪ್​. (ಏಜೆನ್ಸೀಸ್​)

    ಹೈಡ್ರೋಕ್ಸಿಕ್ಲೋರೋಕ್ವಿನ್​ ವಿಚಾರದಲ್ಲಿ ಪ್ರತೀಕಾರದ ಎಚ್ಚರಿಕೆ ನೀಡಿದ್ದ ಟ್ರಂಪ್​ಗೆ ಭಾರತದಿಂದ ಸಮಾಧಾನಕರ ಉತ್ತರ; ಜತೆಗೆ ಸಣ್ಣ ವಾರ್ನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts