South Indian Actors: ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಲ್ಲಿರುವ ಗ್ಲೋಬಲ್ ವಿಲೇಜ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನಟ ಶಾರುಖ್ ಖಾನ್ ಭಾಗವಹಿಸಿ ತಮ್ಮ ವಿಶೇಷ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.
ಇದೀಗ ಅಲ್ಲಿನ ಚಿತ್ರಗಳು ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಒಂದು ವಿಡಿಯೋದಲ್ಲಿ ಅವರು ಈ ದಕ್ಷಿಣ ಭಾರತದ ತಾರೆಗಳನ್ನು ತಮ್ಮ 'ಸ್ನೇಹಿತರು' ಎಂದು ಕರೆದಿದ್ದು, ಭಾರೀ ಸದ್ದು ಮಾಡುತ್ತಿದೆ. ಅಲ್ಲದೆ, ವಿಡಿಯೋದಲ್ಲಿ ದಕ್ಷಿಣ ಭಾರತದ ನಟರನ್ನು ನನ್ನ ಸ್ನೇಹಿತರು ಎನ್ನುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.
ಇದನ್ನೂ ಓದಿ:ನಾನು ತಿರಸ್ಕರಿಸಿದ ಸಿನಿಮಾ ಮಾಡಿದ್ರೆ ಸ್ಟಾರ್ ನಟನಾಗುತ್ತಿದ್ದೆ; ನಟ ಸಿದ್ಧಾರ್ಥ್ ಹೀಗೇಳಿದ್ದೇಕೆ? | Siddharth
ಶಾರುಖ್ ಖಾನ್ ಮಾತನಾಡಿರುವ ವಿಡಿಯೋ ಇದೀಗ ಅಭಿಮಾನಿಯೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಶಾರುಖ್, '' ಕೇರಳ, ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದಲ್ಲಿ(ದಕ್ಷಿಣ ಭಾರತ) ನನಗೆ ಬಹಳಷ್ಟು ಸ್ನೇಹಿತರಿದ್ದಾರೆ. ಅಲ್ಲು ಅರ್ಜುನ್, ಪ್ರಭಾಸ್, ರಾಮ್ಚರಣ್, ಯಶ್, ಪ್ರಭಾಸ್, ಮಹೇಶ್ಬಾಬು,ವಿಜಯ್ ದಳಪತಿ, ರಜಿನಿ ಮತ್ತು ಕಮಲ್ ಸೇರಿ ಹಲವರಿಗೆ ನಾನೊಂದು ವಿನಂತಿಯನ್ನು ಮಾಡುವೆ. ಅದೆನೆಂದರೆ, ಅವರು ತುಂಬಾ ವೇಗವಾಗಿ ಡ್ಯಾನ್ಸ್ ಮಾಡುತ್ತಿದ್ದಾರೆ. ಹೀಗಾಗಿ, ಅವರು ವೇಗವನ್ನು ಕಡಿಮೆ ಮಾಡಿಕೊಳ್ಳಬೇಕು. ಇಲ್ಲವಾದರೆ, ನಾನು ಅವರ ಜತೆ ಕಾಂಪಿಟೆಟ್(ಪೈಪೋಟಿ) ಮಾಡಲು ಸಾಧ್ಯವಿಲ್ಲ ಎಂದು ಹೇಳಿ ನಕ್ಕು ಮುಂದೆ ಸಾಗಿದ್ದಾರೆ.
ವಿಡಿಯೋದಲ್ಲಿ ದಕ್ಷಿಣ ಭಾರತ ನಟರನ್ನು ತನ್ನ ಸ್ನೇಹಿತರು ಎಂದಿದ್ದು, ಅಭಿಮಾನಿಗಳಿಗೆ ಫುಲ್ ಖುಷಿಯಾಗಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.(ಏಜೆನ್ಸೀಸ್)