bollywood: ಮಹಾರಾಷ್ಟ್ರದ ಅಲಿಬಾಗ್ ಥಾಲ್ ಗ್ರಾಮದಲ್ಲಿ ಕೃಷಿ ಭೂಮಿ ಖರೀದಿಸಿದ್ದ ಶಾರುಖಾನ್ ಪುತ್ರಿ ಈಗ ಕಾನೂನು ಸಂಕಷ್ಟಕ್ಕೆ ಎದುರಾಗಿದ್ದಾರೆ. ಸುದ್ದಿ ಮೂಲಗಳ ಪ್ರಕಾರ, ಇವರು ಸರ್ಕಾರವು ರೈತರಿಗೆ ನೀಡಿದ್ದ ಭೂಮಿಯನ್ನು ಸರಿಯಾದ ದಾಖಲೆಗಳು ಹಾಗೂ ಅನುಮತಿ ಇಲ್ಲದೆ ಖರೀದಿಸಿದ್ದಾರೆ ಎಂದು ವರದಿಯಾಗಿದೆ.
IANS ಪ್ರಕಾರ ಈ ಭೂಮಿಯ ಬೆಲೆ ಸುಮಾರು 12.91 ಕೋಟಿ ರೂ.ಗಳಾಗಿದ್ದು, ಮುಂಬೈನ ಕೆಫೆ ಪರೇಡ್ನಲ್ಲಿರುವ ಕುಟುಂಬದಿಂದ ಸುಹಾನಾ ಭೂಮಿಯನ್ನು ಖರೀದಿಸಿದ್ದರು. ಇವರು ನೋಂದಣಿ ಸಮಯದಲ್ಲಿ 77.47 ಲಕ್ಷ ರೂ. ಗಳನ್ನು ಸ್ಟಾಂಪ್ ಡ್ಯೂಟಿ (ತೆರಿಗೆ) ನೀಡಿದ್ದರು. ಮೇ 30, 2023 ರಂದು ಬ್ಯಾಂಕ್ ಮೂಲಕ ವರ್ಗಾವಣೆಯಾಗಿತ್ತು ಎಂದು ತಿಳಿದಿದೆ.
ಈ ತನಿಖೆಯ ಸಮಯದಲ್ಲಿ ಅಲಿಬಾಗ್ ತಹಶೀಲ್ದಾರರಿಂದ ನಿಷ್ಪಕ್ಕಪಾತ ವರದಿಯನ್ನು ಕೋರಲಾಗಿದ್ದು, ಈ ವಿಷಯದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ನಟಿ ಸುಹಾನ ಶಾರುಖ್ ಖಾನ್ ಅಭಿನಯದ ಕಿಂಗ್ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಪಡೆಯಲು ಸಜ್ಜಾಗಿದ್ದಾರೆ. ಸಿನಿಮಾವನ್ನು ಸಿದ್ದಾರ್ಥ್ ಆನಂದ್ ನಿರ್ದೇಶಿಸುತ್ತಿದ್ದು, ಅಭಿಷೇಕ್ ಬಚ್ಚನ್, ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ, ರಾಣಿ ಮುಖರ್ಜಿ ನಂತಹ ಅಸ್ಭುತ ತಾರಾರಂಗವೇ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: US Tariffs: ಅಮೆರಿಕಾ ಮತ್ತು ಭಾರತದ ನಡುವಿನ ವ್ಯಾಪಾರ ಘರ್ಷಣೆ ಶೀಘ್ರ ಸುಖಾಂತ್ಯ ಎಂದ ಅಮೆರಿಕ ಖಜಾನೆ ಕಾರ್ಯದರ್ಶಿ ಬೆಸೆಂಟ್
ಸುಹಾನಾ ಅವರು ದಿ ಆರ್ಚೀಸ್ ಚಿತ್ರದಲ್ಲಿ ಅಗಸ್ತ್ಯಾ ನಂದಾ, ಖುಷಿ ಕಪೂರ್ ಮತ್ತು ಇತರರೊಂದಿಗೆ ನಟಿಸುವ ಮೂಲಕ ನಟನಾರಂಗಕ್ಕೆ ಪ್ರವೇಶ ಪಡೆದರು. ಈ ಚಿತ್ರ ಹಲವಾರು ನಕರಾತ್ಮಕ ವಿಮರ್ಶೆಗಳನ್ನು ಕಂಡಿತು. ಆದರಿಂದ, ನಟಿ ಶಾರುಖ್ಖಾನ್ ಅವರೊಂದಿಗೆ ಕಿಂಗ್ ಚಿತ್ರದಲ್ಲಿ ನಟಿಸಿದ್ದು, ಇದೀಗ ಅಭಿಮಾನಿಗಳು ಪರದೆಯ ಮೇಲೆ ನೋಡಲು ಕಾತುರರಾಗಿದ್ದಾರೆ.
(ಏಜೆನ್ಸೀಸ್)