ಮುಂಬೈ: ಅನಿಲ್ ಕಪೂರ್ ಅಭಿನಯದ ನಾಯಕ್ ಸಿನಿಮಾ ಬಿಡುಗಡೆಯಾಗಿ ಸುಮಾರು 23 ವರ್ಷಗಳಾಗಿದೆ. ರಾಜಕೀಯ ಕಥಾಹಂದರ ಇರುವ ನಾಯಕ್ ಸಿನಿಮಾ ಥಿಯೇಟರ್ಗಳಲ್ಲಿ ಅಂದುಕೊಂಡಂತೆ ಸಕ್ಸಸ್ ಕಾಣಲಿಲ್ಲವಾದರೂ ಜನರ ಮೆಚ್ಚುಗೆ ಪಡೆದುಕೊಂಡಿದೆ. ಈ ಚಲನಚಿತ್ರವು ಟಿವಿಯಲ್ಲಿ ಎಲ್ಲರಿಗೂ ಇಷ್ಟವಾಯಿತು, ವಿಷಯವೆಂದರೆ ಈ ಚಿತ್ರಕ್ಕೆ ನಾಯಕನಾಗಿ ಮೊದಲು ಆಯ್ಕೆ ಆಗಿದ್ದು ಅನಿಲ್ ಕಪೂರ್ ಅಲ್ಲ.. ಶಾರುಖ್ ಖಾನ್ ಆಯ್ಕೆ ಆಗಿದ್ದರು.
ಇದನ್ನು ಓದಿ: ಒಲಿಂಪಿಕ್ಸ್ ವೀಡಿಯೊದಲ್ಲಿ 'ಇಂಕೇಂ ಇಂಕೇಂ ಇಂಕೇಂ ಕಾವಲೇ…' ಹಾಡು; ವಿಜಯ ದೇವರಕೊಂಡ ಏನೇಳಿದ್ರು ಗೊತ್ತಾ?
ಶಂಕರ್ ನಿರ್ದೇಶನದ ನಾಯಕ್ ಸಿನಿಮಾಗೆ ಸಹಿ ಹಾಕಿದ್ದಾಗಿ ಸ್ವತಃ ಶಾರುಖ್ ಖಾನ್ ಅವರೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಶಾರುಖ್ ಚಿತ್ರಕ್ಕೆ ಸಹಿ ಹಾಕಲು ಶಂಕರ್ ಅವರಿಂದ 1 ರೂಪಾಯಿ ಸಂಭಾವನೆ ಕೂಡ ತೆಗೆದುಕೊಂಡಿದ್ದರಂತೆ. ಜತೆಗೆ ಒಂದೇ ಬಾರಿಗೆ ಹಲವು ಡೇಟ್‌ಗಳನ್ನು ನೀಡಲು ಸಿದ್ಧನಿದ್ದೆ ಎಂದು ಹೇಳಿದ್ದಾರೆ.
ಈ ಸಿನಿಮಾ ನಾಯರ್ ಶಂಕರ್ ಅವರ ತಮಿಳು ಚಿತ್ರ ಮಧುಲ್ವನ್ನ ಹಿಂದಿ ರಿಮೇಕ್ ಆಗಿತ್ತು. ಮೂಲ ತಮಿಳು ಚಿತ್ರ ನನಗೆ ತುಂಬಾ ಇಷ್ಟವಾಯ್ತು. ಆದರೆ ಈ ಚಿತ್ರದಲ್ಲಿ ನಟಿಸುವುದು ನನಗೆ ಸರಿ ಎನ್ನಿಸಲಿಲ್ಲ. ನಂತರ ನಾನು ನಿರಾಕರಿಸಿದೆ, ಅದಕ್ಕೆ ಕಾರಣವನ್ನು ಹೇಳಿದೆ ಎಂದಿದ್ದಾರೆ. ತಮಿಳಿನಲ್ಲಿ ಇಡೀ ದಿನ ಮುಖ್ಯಮಂತ್ರಿಯಾಗಿರುವುದು ಅದ್ಭುತವಾಗಿ ಕೆಲಸ ಮಾಡಿದೆ. ಆದರೆ ಉತ್ತರ ಭಾರತದಲ್ಲಿ ಈ ಪರಿಕಲ್ಪನೆ ಇಲ್ಲಿ ಕೆಲಸ ಮಾಡುವುದಿಲ್ಲ ಎಂಬುದು ನನ್ನ ಅಭಿಪ್ರಾಯವಾಗಿತ್ತು.
ಅದಕ್ಕಾಗಿಯೇ ಈ ಸಿನಿಮಾದಲ್ಲಿ ಕೆಲಸ ಮಾಡಲು ನಿರಾಕರಿಸಿದೆ ಎಂದು ಹೇಳಿದ್ದಾರೆ. ಅದಷ್ಟೆ ಅಲ್ಲದೆ ಅವರ ಸಹಿ ಮೊತ್ತವು ಇನ್ನೂ ನನ್ನ ಬಳಿ ಇದೆ. ದಿನಾಂಕಗಳ ಬಗ್ಗೆ ನನ್ನ ಭರವಸೆ ಇನ್ನೂ ಇದೆ. ಖಂಡಿತವಾಗಿಯೂ ಅವರ ಜತೆ ಕೆಲಸ ಮಾಡಲು ಬಯಸುವೆ ಎಂದಿದ್ದಾರೆ. (ಏಜೆನ್ಸೀಸ್)