ನ್ಯೂಸ್

ನಯನತಾರಾ - ವಿಘ್ನೇಶ್​ ಮದುವೆಯಲ್ಲಿ ಕಾಣಿಸಿಕೊಂಡ ಶಾರುಖ್​​ ಕಾಲೆಳೆದ ಟ್ವಿಟ್ಟಿಗರು!: ಕಾರಣವೇನು ಗೊತ್ತಾ?

ಮುಂಬೈ: ನಯನತಾರಾ ಹಾಗೂ ವಿಘ್ನೇಶ್​ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್​ ನಟ ಶಾರುಖ್​ ಖಾನ್​​ ಸದ್ಯಕ್ಕೆ ಟ್ರೋಲ್​ ಆಗಿದ್ದಾರೆ.

ಅರೆ.. ಏನಿದು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ತಪ್ಪಾಯ್ತಾ ಎಂಬ ಪ್ರಶ್ನೆ ಮೂಡುವುದು ಸಹಜ... ಸದ್ಯ ಮದುವೆಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಮಾತ್ರವಲ್ಲ ಇತ್ತೀಚೆಗೆ ತಮಗೆ ಕೊವಿಡ್​​ ಸೊಂಕು ತಗುಲಿದೆ ಎಂದು ಹೇಳಿ ಚಿಕಿತ್ಸೆ ಪಡೆಯುತ್ತಿದ್ದ ಶಾರುಖ್​ ಏಕಾಏಕಿ ಮದುವೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವುದಕ್ಕೆ ಟ್ವಿಟ್ಟಿಗರು ಟೀಕೆಯನ್ನು ಮಾಡುತ್ತಿದ್ದಾರೆ.

ಕಳೆದ ವಾರವಷ್ಟೇ ಶಾರುಖ್​ ಖಾನ್​ ಅವರಿಗೆ ಕರೊನಾ ಪಾಸಿಟಿವ್​ ಇದೆ ಎಂದು ಸುದ್ದಿಯಾಗಿತ್ತು. ಕರೊನಾ ಲಕ್ಷಣ ಇರುವುದರಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿತ್ತು. ಇದಾದ ಮೂರ್ನಾಲ್ಕು ದಿನದಲ್ಲೇ ಶಾರುಖ್​ ನಯನತಾರಾ-ವಿಘ್ನೇಶ್​ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಕೆಲ ಟ್ವಿಟ್ಟಿಗರು ಹಾಗಾದರೆ ಇವರಿಗೆ ಬಂದಿದ್ದು, ಕರೊನಾ ಅಲ್ಲ, ಆಸಿಡಿಟಿ ಇರಬಹುದು. ಏನಿದು ಎರಡು ದಿನ ಬಂದ ಕರೊನಾ ಮೂರನೇ ದಿನಕ್ಕೆ ಹೋಗಿಬಿಡ್ತಾ ಎಂದು ಪ್ರಶ್ನಿಸಿದ್ದಾರೆ. ಅವರಿಗೆ ಕೊವಿಡ್​ ಅಲ್ಲ ಸ್ವಲ್ಪ ಜ್ವರ ಬಂದಿತ್ತಷ್ಟೇ ಎಂದು ಮತ್ತೊಬ್ಬ ಟ್ವಿಟಿಗ ಕಾಲೆಳೆದಿದ್ದಾರೆ. (ಏಜೆನ್ಸೀಸ್​)