ನ್ಯೂಸ್

ನಯನತಾರಾ ಮೇಡಂ ಮೇಲೆ ಕ್ರಶ್​​ ಆಗಿದ್ಯಾ? ಅಭಿಮಾನಿ​ ಪ್ರಶ್ನೆ; ಅಚ್ಚರಿ ಮೂಡಿಸಿದ Shah Rukh Khan ಕೊಟ್ಟ ಉತ್ತರ..

ಮುಂಬೈ: ಜವಾನ್' ಚಿತ್ರದಲ್ಲಿನ ಶಾರೂಖ್ ಖಾನ್( Shah Rukh Khan) ಮತ್ತು ನಯನತಾರಾ ಜೋಡಿ ಎಲ್ಲರ ಮೆಚ್ಚಿಗೆ ಗಳಿಸಿತ್ತು. ಇಬ್ಬರ ಕೆಮಿಸ್ಟ್ರಿ ಸಿನಿಮಾ ಮಂದಿ ಫಿದಾ ಆಗಿದ್ದರು. ದಕ್ಷಿಣ ಚಿತ್ರರಂಗದಲ್ಲಿ ಲೇಡಿ ಸೂಪರ್‌ಸ್ಟಾರ್ ಎಂದು ಕರೆಯಲ್ಪಡುವ ನಯನತಾರಾ 2023ರಲ್ಲಿ 'ಜವಾನ್' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. 'ಜವಾನ್' ಚಿತ್ರೀಕರಣದ ಸಮಯದಲ್ಲಿ ಶಾರೂಖ್ ಮತ್ತು ನಯನತಾರಾ ಜೋಡಿ ಕುರಿತು ಅಭಿಮಾನಿಯೊಬ್ಬರು ನೀವು ನಯನತಾರಾ ಅವರನ್ನು ಪ್ರೀತಿಸಿದ್ದೀರಾ ಎಂದು ಶಾರೂಖ್‌ಗೆ ಕೇಳಿದ್ದರು. ಆಗ ಕಿಂಗ್ ಖಾನ್ ಕೊಟ್ಟ ಉತ್ತರ ಸದ್ಯ ವೈರಲ್ ಆಗುತ್ತಿದೆ.

ಶಾರೂಖ್​​ ಖಾನ್ ಅಭಿಮಾನಿಗಳೊಂದಿಗೆ #AskSRK ಸೆಶನ್ ನಡೆಸುತ್ತಿದ್ದಾಗ, ಅದರಲ್ಲಿ ಅಭಿಮಾನಿಯೊಬ್ಬರು ನಯನತಾರಾ ಅವರನ್ನು ಪ್ರೀತಿಸಿದ್ದೀರೋ.. ಇಲ್ಲವೋ.., ನಿಮಗೆ ಅವರ ಮೇಲೆ ಕ್ರಶ್​ ಆಗಿದ್ಯಾ ಎಂದು ಕೇಳಿದ್ದರು. ಇದನ್ನು ಕೇಳಿದ ಶಾರೂಖ್, 'ಶಟ್ ಅಪ್! ಆಕೆ ಎರಡು ಮಕ್ಕಳ ತಾಯಿ. ಹಹಹ.'ಎಂದು ಉತ್ತರಿಸಿದ್ದರು. ಆಗ ಅಭಿಮಾನಿಗಳು ಶಾರೂಖ್ ಅವರ ಸ್ಟೈಲ್ ಅನ್ನು ತುಂಬಾ ವಿನಮ್ರತೆಯಿಂದ ಹೇಗೆ ಎದುರಿಸುತ್ತಾರೆ ಎಂದು ಹೊಗಳಿದ್ದರು.

ಅಂದ್ಹಾಗೆ, ನಯನತಾರಾ ಕೂಡ ಶಾರೂಖ್ ಅಭಿಮಾನಿಯಾಗಿದ್ದಾರೆ. ಅವರು ಕಿಂಗ್ ಖಾನ್ ಬಗ್ಗೆ ತಮ್ಮ ಒಲವನ್ನು ಹಲವು ಸಮಯಗಳಲ್ಲಿ ವ್ಯಕ್ತಪಡಿಸಿದ್ದಾರೆ. ಯಾರು ಅವರಿಗೆ ಅಭಿಮಾನಿ ಅಲ್ಲ ಹೇಳಿ? ನಾವೆಲ್ಲರೂ ಅವರ ಚಿತ್ರಗಳನ್ನು ನೋಡುತ್ತಾ ಬೆಳೆದಿದ್ದೇವೆ. ನಾವೆಲ್ಲರೂ ಅವರನ್ನು ಇಷ್ಟಪಡುತ್ತೇವೆ. ದೊಡ್ಡ ತಾರೆಯಷ್ಟೆ ಅಲ್ಲ ಹೆಣ್ಣನ್ನು ತುಂಬಾ ಗೌರವಿಸುತ್ತಾರೆ. ನಾನು ಅದನ್ನು ಪ್ರಶಂಸಿಸುತ್ತೇನೆ ಎಂದು ನಯನತಾರಾ ಸಂದರ್ಶನವೊಂದರಲ್ಲಿ ಹೇಳಿದ್ದರು.

ದಕ್ಷಿಣದ ಖ್ಯಾತ ನಿರ್ದೇಶಕ ಅಟ್ಲಿ ನಿರ್ದೇಶನದ ಜವಾನ್ ಸಿನಿಮಾ ಹಿಂದಿ ಮಾತ್ರವಲ್ಲದೆ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗಿದೆ. ಬಿಡುಗಡೆಯಾದ ಮೇಲೆ ದೇಶಾದ್ಯಂತ 640.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.(ಏಜೆನ್ಸೀಸ್​​)