ಮುಂಬೈ: ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಪಠಾಣ್ ದೊಡ್ಡ ಬ್ರೇಕ್ ನೀಡಿದೆ. ಬಾಲಿವುಡ್ ನಟ ಶಾರುಖ್ ಖಾನ್ ಅವರ ಪಠಾಣ್ ಸಿನಿಮಾ ದೊಡ್ಡಮಟ್ಟದ ಹಿಟ್ ಆದ ಬಳಿಕ 10 ಕೋಟಿ ರೂ. ಮೌಲ್ಯದ ಕಾರು ಖರೀದಿಸಿದ್ದಾರೆ.
ಶಾರುಖ್ ಬಳಿ ಈಗಾಗಲೇ ಅನೇಕ ದುಬಾರಿ ಕಾರುಗಳಿವೆ. ಇದೀಗ ರೋಲ್ಸ್ ರಾಯ್ಸ್ ಕುಲ್ಲಿನಾನ್ ಬ್ಲ್ಯಾಕ್ ಬ್ಯಾಡ್ಜ್ ಕಾರು ಸೇರ್ಪಡೆಯಾಗಿದೆ.ಶಾರುಖ್ ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಕುಲ್ಲಿನಾನ್ ಬ್ಲ್ಯಾಕ್ ಬ್ಯಾಡ್ಜ್ ಕಾರು ಖರೀದಿಸಿದ್ದಾರೆ. ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ದುಬಾರಿ ಕಾರು ಇದಾಗಿದೆ.
ವರದಿಗಳ ಪ್ರಕಾರ ಕಾರಿನ ಶೋರೂಂ ಬೆಲೆ ಸುಮಾರು 8.20 ಕೋಟಿ ರೂಪಾಯಿ ಆದರೆ ಆನ್ ರೋಡ್ 10 ಕೋಟಿಗೆ ಹೆಚ್ಚಿಸುತ್ತವೆ. ಅಭಿಮಾನಿಗಳು ಶಾರುಖ್ ಅವರ ಹೊಸ ಕಾರು ಮನ್ನತ್‌ಗೆ ಪ್ರವೇಶಿಸಿದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಶಾರುಖ್ ಹೊಸ ಕಾರಿಗೆ '555' ನಂಬರ್ ಪ್ಲೇಟ್ ಕೂಡ ಇದೆ. ಶಾರುಖ್ ಹೊಸ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಹುಟ್ಟುಹಬ್ಬದ ಪಾರ್ಟಿ ಮಾಡಲು ಹೋದ ಯುವಕ ಶವವಾಗಿ ಪತ್ತೆ