ನ್ಯೂಸ್

Sexual Harassment | ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರ್ ಎಸ್​​ಐಟಿ ವಶಕ್ಕೆ; ನಟಿ ಹನಿ ರೋಸ್​​ ಪ್ರತಿಕ್ರಿಯಿಸಿದ್ದು ಹೀಗೆ..

ತಿರುವನಂತಪುರಂ: ಮಲಯಾಳಂ ನಟಿ ಹನಿ ರೋಸ್ ಸಲ್ಲಿಸಿದ್ದ ಲೈಂಗಿಕ ಕಿರುಕುಳ(Sexual Harassment) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣದ ಆರೋಪಿ ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರ್ ಅವರನ್ನು ವಶಕ್ಕೆ ತೆಗೆದುಕೊಂಡಿದೆ. ಬಾಬಿ ಚೆಮ್ಮನೂರನ್ನು ವಯನಾಡ್‌ನಿಂದ ಬಂಧಿಸಲಾಗಿದೆ ಎಂದು ಕೊಚ್ಚಿ ನಗರ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ನಟಿ ಹನಿ ರೋಸ್ ಅವರ ದೂರಿನ ಮೇರೆಗೆ ಚೆಮ್ಮನೂರ್ ವಿರುದ್ಧ ಜಾಮೀನು ರಹಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿತ್ತು. ಚೆಮ್ಮನೂರು ತಮ್ಮ ವಿರುದ್ಧ ಹಲವು ಬಾರಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ರೋಸ್ ದೂರಿನಲ್ಲಿ ಆರೋಪಿಸಿದ್ದರು. ಲೈಂಗಿಕ ಕಿರುಕುಳ ಪ್ರಕರಣದಡಿ ಈ ಕ್ರಮಕೈಗೊಳ್ಳಲಾಗಿದ್ದು, ಬಾಬಿ ಚೆಮ್ಮನೂರ್​ನನ್ನು ​ತನಿಖೆಯ ಭಾಗವಾಗಿ ಬಂಧಿಸಲಾಗಿದೆ.

ನಟಿ ಹನಿ ರೋಸ್ ಪ್ರತಿಕ್ರಿಯೆ ಹೀಗಿದೆ

ಪೊಲೀಸ್ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ನಟಿ ಹನಿ ರೋಸ್, ಇದು ನನಗೆ ಶಾಂತಿಯ ದಿನ ಎಂದು ಸಾಬೀತಾಗಿದೆ ಎಂದು ಹೇಳಿದರು. ಖಾಸಗಿ ವಾಹಿನಿಗೆ ಜತೆ ಮಾತನಾಡಿರುವ ನಟಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬಳಿ ಈ ವಿಷಯ ಪ್ರಸ್ತಾಪಿಸಿದ್ದೇನೆ. ಬಳಿಕ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು ಎಂದು ಹೇಳಿದರು.

ನಟಿ ಹನಿ ರೋಸ್​​ ಜನವರಿ 5 ರಂದು ತನ್ನ ಕೆಟ್ಟ ಅನುಭವವನ್ನು ಹಂಚಿಕೊಳ್ಳುವಾಗ ಉದ್ಯಮಿ ನಿರಂತರವಾಗಿ ತನಗೆ ಡಬಲ್ ಮೀನಿಂಗ್ ಕಾಮೆಂಟ್‌ಗಳನ್ನು ಮಾಡುತ್ತಿದ್ದಾನೆ. ಮತ್ತು ಕಾರ್ಯಕ್ರಮಗಳಲ್ಲಿಯೂ ತನ್ನನ್ನು ಅನುಸರಿಸುತ್ತಿದ್ದ ಎಂದು ಬಹಿರಂಗಪಡಿಸಿದ್ದರು. ನಾನು ಸಾಮಾನ್ಯವಾಗಿ ಅಂತಹ ವಿಷಯಗಳನ್ನು ನಿರ್ಲಕ್ಷಿಸುತ್ತೇನೆ. ಆದರೆ ಈ ಸಂದರ್ಭದಲ್ಲಿ ಅವಮಾನವಾದ ಕಾರಣ ಪ್ರತಿಕ್ರಿಯಿಸುವ ಅಗತ್ಯವಿತ್ತು. ಈ ವ್ಯಕ್ತಿ ತನಗೆ ಆಹ್ವಾನ ನೀಡಿದ ಸಮಾರಂಭಗಳಿಗೆ ಹೋಗಿ ಸಾರ್ವಜನಿಕವಾಗಿ ತನ್ನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಾನೆ ಎಂದು ಹನಿ ರೋಸ್ ಹೇಳಿದ್ದರು.(ಏಜೆನ್ಸೀಸ್​​)