ಮುಂಬೈ: ಹೋಳಿ ಹಬ್ಬದ ಸಮಯದಲ್ಲಿ ಸಹನಟ ತನ್ನೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ನಟಿಯೊಬ್ಬರು ಆರೋಪಿಸಿದ್ದಾರೆ. ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ(Sexual Harassment) ಪ್ರಕರಣ ದಾಖಲಿಸಿದ್ದಾರೆ. 14 ಮಾರ್ಚ್ 2025ರಂದು ದೇಶಾದ್ಯಂತ ಹೋಳಿ ಹಬ್ಬವನ್ನು ಆಚರಿಸಲಾಯಿತು.
ಇದನ್ನು ಓದಿ: ಊಟ-ನಿದ್ರೆ ಮಾಡಲು ಬಿಟ್ಟಿಲ್ಲ.. ನನಗೆ ಥಳಿಸಿದ್ರು; DRI ಹೆಚ್ಚುವರಿ ಮಹಾನಿರ್ದೇಶಕರಿಗೆ ರನ್ಯಾ ರಾವ್ ಪತ್ರ | Ranya Rao
ನಟಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಮುಂಬೈ ಪೊಲೀಸರ ಪ್ರಕಾರ, ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 75(1) ಅಡಿಯಲ್ಲಿ ಸಹನಟನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
29 ವರ್ಷದ ನಟಿಯು ಕಿರುತೆರೆಯ ಧಾರಾವಾಹಿಯಲ್ಲಿ ಮತ್ತು ಸೀರಿಸ್ನಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಆಕೆ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಘಟನೆಯು ಶುಕ್ರವಾರ ನಡೆದಿದೆ. ನಟಿಯ ಪ್ರಕಾರ, ಅವರ ಕಂಪನಿಯ ಮೇಲ್ಛಾವಣಿಯ ಮೇಲೆ ಹೋಳಿ ಪಾರ್ಟಿಯನ್ನು ಆಯೋಜಿಸಲಾಗಿತ್ತು. 30 ವರ್ಷದ ಸಹನಟ ಕುಡಿದಿದ್ದ, ಅವನು ನನ್ನ ಮೇಲೆ ಮತ್ತು ಪಾರ್ಟಿಯಲ್ಲಿದ್ದ ಇತರ ಮಹಿಳೆಯರ ಮೇಲೆ ಬಣ್ಣ ಎರಚಲು ಪ್ರಯತ್ನಿಸುತ್ತಿದ್ದನು ಎಂದು ಹೇಳಿದ್ದಾರೆ.
ನನಗೆ ಅವನ ಜತೆ ಹೋಳಿ ಆಡಲು ಇಷ್ಟವಿರಲಿಲ್ಲ, ಹಾಗಾಗಿ ನಾನು ಬೇಡವೆಂದು ಹೇಳುತ್ತಾ ಅವನಿಂದ ದೂರ ಸರಿದೆ. ಟೆರೇಸ್‌ನಲ್ಲಿದ್ದ ಪಾನಿಪುರಿ ಸ್ಟಾಲ್‌ನ ಹಿಂದೆ ಹೋದೆ ಆದರೂ ಅವನು ನನ್ನನ್ನು ಬಿಡದೆ, ಹಿಂಬಾಲಿಸಿ ನನ್ನ ಮೇಲೆ ಬಣ್ಣಗಳನ್ನು ಎರಚಲು ಪ್ರಾರಂಭಿಸಿದನು. ನಾನು ಮುಖ ಮುಚ್ಚಿಕೊಂಡೆ ಆದರೆ ಅವನು ನನ್ನನ್ನು ಬಲವಂತವಾಗಿ ಹಿಡಿದು ನನ್ನ ಕೆನ್ನೆಗಳಿಗೆ ಬಣ್ಣ ಬಳಿದ. ಬಳಿಕ ನನ್ನ ಬಳಿ ಅನುಚಿತವಾಗಿ ವರ್ತಿಸಿದ ಎಂದು ತಿಳಿಸಿದ್ದಾರೆ.
ನಾನು ನಿನ್ನನ್ನು ಪ್ರೀತಿಸುತ್ತೇನೆ, ನಾನು ನಿನ್ನ ಬಳಿಗೆ ಬರುವುದನ್ನು ಯಾರು ತಡೆಯಬಹುದೆಂದು ನೋಡೋಣ ಎಂದು ಹೇಳುತ್ತಾ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ನಂತರ ಆತನನ್ನು ದೂರ ತಳ್ಳುತ್ತಿದ್ದರೂ ಸಹ ಅವನು ಅನುಚಿತವಾಗಿ ಮುಟ್ಟಲು ಪ್ರಾರಂಭಿಸಿದನು. ನಾನು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದೆ ಮತ್ತು ನೇರವಾಗಿ ವಾಶ್‌ರೂಮ್‌ಗೆ ಹೋದೆ ಎಂದಿದ್ದಾರೆ.(ಏಜೆನ್ಸೀಸ್)