ಕೊಲೊರಾಡೋದಲ್ಲಿ ಸ್ಯಾನ್ ಜುವಾನ್ ನದಿ ಪ್ರವಾಹದಲ್ಲಿ ತೇಲಿ ಹೋದ ಮನೆ
ಫ್ಲೋರಿಡಾದಲ್ಲಿ ಕೇವಲ 12 ಗಂಟೆಗಳಲ್ಲಿ ಬರೋಬ್ಬರಿ 2 ಅಡಿಯಷ್ಟು ದಾಖಲೆ ಮಳೆ
ಪ್ರವಾಹದ ನೀರಿಗೆ ಶಾಲಾ ಮಗುವನ್ನು ಇಳಿಸಿದ ಬಸ್ ಚಾಲಕನ ನಡೆಗ ಆಕ್ರೋಶ
Colorado Flood: ಅಮೆರಿಕದಲ್ಲಿ ಭೀಕರ ಮಳೆ-ಪ್ರವಾಹದ ಅಬ್ಬರಕ್ಕೆ ಜನ ಬೆಚ್ಚಿಬಿದ್ದಿದ್ದಾರೆ. ಕೊಲೊರಾಡೋದಲ್ಲಿ ದೊಡ್ಡ ಮನೆಯೊಂದು ನದಿಯಲ್ಲೇ ತೇಲಿ ಹೋಗಿ ಸೇತುವೆಗೆ ಬಡಿದು ಚೂರಾಗಿದ್ದರೆ, ಫ್ಲೋರಿಡಾದಲ್ಲಿ ಬಸ್ ಡ್ರೈವರ್ನ ಬೇಜವಾಬ್ದಾರಿಗೆ ಮಗುವೊಂದು ಪ್ರಾಣಾಪಾಯದಿಂದ ಬಚಾವ್ ಆಗಿದೆ. ಮೊಸಳೆಗಳಿರಬಹುದಾದ ಕಲುಷಿತ ನೀರಲ್ಲೇ ಮಗುವನ್ನಿಳಿಸಿದ ಡ್ರೈವರ್ ಆಟ ನೋಡಿ ನೆಟ್ಟುಗರು ಗರಂ ಆಗಿದ್ದಾರೆ.
ಅಮೆರಿಕದ ಕೊಲೊರಾಡೋ ರಾಜ್ಯದ ಪ್ಯಾಗೋಸಾ ಸ್ಪ್ರಿಂಗ್ಸ್ ಅನ್ನೋ ರೆಸಾರ್ಟ್ ಟೌನ್ನಲ್ಲಿ ಭೀಕರ ಪ್ರವಾಹ ಬಂದಿದೆ. ಅಲ್ಲಿ ವಿಪರೀತ ಮಳೆ ಬಂದಿದ್ದರಿಂದ ಸ್ಯಾನ್ ಜುವಾನ್ ನದಿ ಅಪಾಯದ ಮಟ್ಟ ಮೀರಿ ಹರಿದಿದೆ. ನದಿ ನೀರು ನುಗ್ಗಿದ್ದರಿಂದ ದಡದಲ್ಲಿದ್ದ ದೊಡ್ಡ ಮೊಬೈಲ್ ಮನೆಯೊಂದು ಪೂರ್ತಿಯಾಗಿ ತೇಲಿಕೊಂಡು ಹೋಗಿ, ಮುಂದೆ ಇದ್ದ ಬ್ರಿಡ್ಜ್ಗೆ ಜೋರಾಗಿ ಗುದ್ದಿ ನುಜ್ಜುಗುಜ್ಜಾಗಿದೆ.
ಇನ್ನೊಂದೆಡೆ ಫ್ಲೋರಿಡಾದ ಟ್ರೆಷರ್ ಕೋಸ್ಟ್ ಭಾಗದಲ್ಲಿ ಕೇವಲ 12 ಗಂಟೆಯಲ್ಲಿ ಬರೋಬ್ಬರಿ 24 ಇಂಚು ಮಳೆ ಬಿದ್ದು, ಇಡೀ ಏರಿಯಾಗಳು ನೀರಲ್ಲಿ ಮುಳುಗಿಹೋಗಿವೆ. ಇಲ್ಲಿ ಸ್ವಿಮ್ಮಿಂಗ್ ಪೂಲ್ ಹಾಗೂ ನದಿಗಳ ಪಕ್ಕದಲ್ಲಿ ಪ್ರವಾಹ ಬಂದರೆ, ನೀರ ಜತೆಗೆ ಮೊಸಳೆಗಳು ನೇರವಾಗಿ ರಸ್ತೆ ಹಾಗೂ ಮನೆಗಳ ಹತ್ತಿರ ಬರುವ ಅಪಾಯ ಇರುತ್ತೆ.
ಇಂಥ ಕಲುಷಿತ ಮತ್ತೆ ಮೊಸಳಿರುವ ಅಪಾಯಕಾರಿ ನೀರಲ್ಲೇ ಶಾಲಾ ಮಗುವನ್ನು ಬಸ್ನಿಂದ ಕೆಳಗಿಳಿಸಿ ನಡದು ಹೋಗಲು ಬಿಟ್ಟ ಡ್ರೈವರ್ ನಡೆಗೆ ಜನ ಗರಂ ಆಗಿದ್ದಾರೆ. ಮಗುವಿನ ಮನೆ ಹತ್ತಿರವೇ ಇದ್ದ ಟೀನಾ ಗೇಮ್ಸ್ ಅನ್ನೋರು ಈ ಶಾಕಿಂಗ್ ದೃಶ್ಯವನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದು, ವಿಡಿಯೋ ನೋಡಿದ ಜನ ಆತಂಕ ವ್ಯಕ್ತಪಡಿಸಿದ್ದಾರೆ.
ಬಸ್ ಡ್ರೈವರ್ನ ಈ ಬೇಜವಾಬ್ದಾರಿ ಕೆಲಸದ ಬಗ್ಗೆ ಸೇಂಟ್ ಲೂಸಿ ಕೌಂಟಿ ಶಾಲಾ ಮಂಡಳಿ ತನಿಖೆ ಆರಂಭಿಸಿದೆ. ನೆರೆ ಇದ್ದಾಗ ಬಸ್ ಸುರಕ್ಷಿತ ಜಾಗದಲ್ಲಿ ನಿಲ್ಲಿಸಬೇಕು ಅಥವಾ ಪೋಷಕರಿಗೆ ತಿಳಿಸಬೇಕೆಂಬ ನಿಯಮ ಮುರಿದ ಚಾಲಕನ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತಿದೆ.