ಮುಂಬೈ: ದೇಶೀಯ ಷೇರು (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರ (ಅ.31) ಭಾರೀ ಇಳಿಕೆ ಕಂಡಿದೆ.
ಬಿಎಸ್‌ಇ ಸೆನ್ಸೆಕ್ಸ್ 465.75 ಪಾಯಿಂಟ್‌ಗಳೊಂದಿಗೆ ಶೇ. 0.55% ಇಳಿಕೆಯಾಗಿ 83,938.71 ಅಂಕಕ್ಕೆ ಸ್ಥಿರವಾಗಿದೆ. ನಿಫ್ಟಿ50 ಸೂಚ್ಯಂಕವು 155.75 ಪಾಯಿಂಟ್‌ಗಳ ಕುಸಿತದೊಂದಿಗೆ 25,722 ಅಂಕಕ್ಕೆ ಮುಕ್ತಾಯಗೊಂಡಿದೆ.ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ 0.5 ಪ್ರತಿಶತ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು 0.4 ಪ್ರತಿಶತ ಕುಸಿತ ಕಂಡವು. ಅಲ್ಲದೆ, ಕಳೆದ 4 ದಿನಗಳಿಂದ ನಿರಂತರ ಏರಿಕೆಯಲ್ಲಿದ್ದ ಷೇರುಪೇಟೆ ಇದೀಗ ವಾರಾಂತ್ಯದಲ್ಲಿ ಕುಸಿತಗೊಂಡಿದೆ.
ನಿಫ್ಟಿ 50 ಸೂಚಂಕದ 41 ಷೇರುಗಳು ಕುಸಿದಿವೆ. ಅವುಗಳಲ್ಲಿ ಎಟರ್ನಲ್ ಶೇ.3.45 ರಷ್ಟು ಕುಸಿದು ಅತಿ ಹೆಚ್ಚು ನಷ್ಟ ಅನುಭವಿಸಿತು. ನಂತರ ಎನ್‌ಟಿಪಿಸಿ, ಸಿಪ್ಲಾ ಮತ್ತು ಮ್ಯಾಕ್ಸ್ ಹೆಲ್ತ್ ಶೇ. 2.5 ರಷ್ಟು ಕುಸಿದಿವೆ.(ಏಜೆನ್ಸೀಸ್)