ನ್ಯೂಸ್

ತಲೆಗೆ ಗುಂಡು ಹಾರಿಸಿಕೊಂಡು ಹಿರಿಯ ಐಪಿಎಸ್​ ಅಧಿಕಾರಿ ಮೃತ್ಯು

ಚೆನ್ನೈ: ಹಿರಿಯ ಐಪಿಎಸ್​ ಅಧಿಕಾರಿಯೊಬ್ಬರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಸಿ. ವಿಜಯ್​ಕುಮಾರ್​(45) ಎಂದು ಗುರುತಿಸಲಾಗಿದ್ದು, ಇವರು ಕೊಯಮತ್ತೂರು ಜಿಲ್ಲೆಯ ಡೆಪ್ಯೂಟಿ ಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ 6:45ರ ಸುಮಾರಿಗೆ ವಾಯು ವಿಹಾರ ಮುಗಿಸಿಕೊಂಡು ವಾಪಸ್​ ಬಂದ ನಂತರ ಸರ್ವೀಸ್​ ರಿವಾಲ್ವರ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2009ರ ಬ್ಯಾಚ್​ನ ತಮಿಳುನಾಡು ಕೇಡರ್​ನ ಐಪಿಎಸ್​ ಅಧಿಕಾರಿಯಾಗಿದ್ದ ವಿಜಯ್​ಕುಮಾರ್​ ಅವರು ಕಳೆದ ಕೆಲ ತಿಂಗಳುಗಳಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ನಿದ್ರಾಹೀನತೆಯಿಂದ ಸಹ ಬಳಲುತ್ತಿದ್ದರು ಎಂದು ಹೇಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ಡಿಜಿಪಿ ಶಂಕರ್​ ಜೈವಾಲ್​ ವಿಜಯ್​ಕುಮಾರ್​ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ. ನಿದ್ರಾಹೀನತೆಯಿಮದ ಬಳುತ್ತಿದ್ದ ಅವರು ಮಾತ್ರೆಗಳನ್ನು ಸೇವಿಸುತ್ತಿದ್ದರು ಎಂದು ಹೇಳಲಾಗಿದೆ.

ಅವರ ಆತ್ಮಹತ್ಯೆಗೆ ಕೆಲಸದ ಒತ್ತಡವೂ ಸಹ ಪ್ರಮುಖ ಕಾರಣ ಎಂದು ಹೇಳಲಾಗಿದ್ದು, ಈ ಬಗ್ಗೆ ತನಿಖಾ ವರದಿ ಕೈ ಸೇರಿದ ನಂತರ ಮತ್ತಷ್ಟು ಮಾಹಿತಯನ್ನು ಹಂಚಿಕೊಳ್ಳಲಾಗುವುದು ಎಂದು ತಮಿಳುನಾಡು ಡಿಜಿಪಿ ಶಂಕರ್ ಜೈವಾಲ್​ ತಿಳಿಸಿದ್ದಾರೆ.