More

    ಲಿಂಗಾಯತರ ಶೈಕ್ಷಣಿಕ ಕ್ರಾಂತಿಗೆ ಮಹಾಸಭಾ ಕಾರಣ: ಎಂ.ಬಿ. ಪಾಟೀಲ್

    ಬೆಂಗಳೂರು: ರಾಜ್ಯದಲ್ಲಿ ಬಿಎಲ್ ಡಿಇ, ಕೆಎಲ್ಇ, ಎಚ್ ಕೆಇಎಸ್, ಬಸವೇಶ್ವರ ವಿದ್ಯಾಸಂಸ್ಥೆ ಯಂತಹ ಶಿಕ್ಷಣ ಸಂಸ್ಥೆಗಳ ಹುಟ್ಟಿಗೆ ಅಖಿಲ ಭಾರತ ವೀರಶೈವ ಮಹಾಸಭಾವನ್ನು ಕಟ್ಟಿದ ಪುಣ್ಯಪುರುಷರ ಮುಂದಾಲೋಚನೆ ಕಾರಣ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

    ವೀರಶೈವ ಲಿಂಗಾಯತ ಸಮುದಾಯದಿಂದ ಆಯ್ಕೆಯಾಗಿರುವ ನೂತನ ಶಾಸಕರು ಮತ್ತು ಸಚಿವರುಗಳಿಗೆ ಮಹಾಸಭಾದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಎಂಬಿಪಿ ಸಮುದಾಯದವರು ನಡೆಸುವ ಕನಿಷ್ಠ ಒಂದಾದರೂ ಶಿಕ್ಷಣ ಸಂಸ್ಥೆ ಇರಬೇಕು ಎಂದಿದ್ದಾರೆ.

    ಲಿಂಗಾಯತ ಮಠಮಾನ್ಯಗಳು ಇಂದು ನಾಡಿನಲ್ಲಿ ಶಿಕ್ಷಣ ದಾಸೋಹದಲ್ಲಿ ಮುಂಚೂಣಿಯಲ್ಲಿವೆ. ಮಹಾಸಭಾದ ಸ್ಥಾಪಕರಲ್ಲಿ ಒಬ್ಬರಾದ ರುದ್ರಗೌಡರು ನಮ್ಮ ತಾಯಿಯ ಕಡೆಯಿಂದ ಅಜ್ಜನವರಾಗಬೇಕು. ಇವರೆಲ್ಲರೂ ನಾಡಿನ ಪ್ರತಿಯೊಂದು ಜಿಲ್ಲೆಯಲ್ಲೂ ವೀರಶೈವ ಲಿಂಗಾಯತ ಸಮುದಾಯದವರು ನಡೆಸುವ ಕನಿಷ್ಠ ಒಂದಾದರೂ ಶಿಕ್ಷಣ ಸಂಸ್ಥೆ ಇರಬೇಕು ಎಂದು ಕನಸು ಕಂಡಿದ್ದರು. ಈಗ ಅದು ನನಸಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

    ಇದನ್ನೂ ಓದಿ: NSUI ಉಸ್ತುವಾರಿಯಾಗಿ ಕನ್ಹಯ್ಯಾ ಕುಮಾರ್ ನೇಮಕ ಮಾಡಿದ ಎಐಸಿಸಿ

    ನಮಗೆ ಸಕಲವನ್ನೂ ಕೊಟ್ಟಿರುವ ಸಮಾಜಕ್ಕೆ ಪ್ರತಿಯಾಗಿ ನಾವೇನು ಕೊಡುತ್ತೇವೆ ಎನ್ನುವ ಸಂದೇಶ ಇಂದಿನ ಸನ್ಮಾನದಲ್ಲಿದೆ. ಇದನ್ನು ಸಮುದಾಯದ ಜನಪ್ರತಿನಿಧಿಗಳು ಅರಿತು ನಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಸಮಾರಂಭದಲ್ಲಿ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷ ಎನ್ ತಿಪ್ಪಣ್ಣ, ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವ ಈಶ್ವರ ಖಂಡ್ರೆ, ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ, ಲಕ್ಷ್ಮಿ‌ ಹೆಬ್ಬಾಳ್ಕರ್ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts