ನ್ಯೂಸ್

Photos: ರತ್ನನ್​ ಪ್ರಪಂಚಕ್ಕೆ ಆಗಮಿಸಿದ ನಟಿ ಉಮಾಶ್ರೀ

ಪೋಸ್ಟರ್ ಮೂಲಕವೇ ಸದ್ದು ಮಾಡಿದ್ದ ಡಾಲಿ ಧನಂಜಯ ಅವರ ಹೊಸ ಸಿನಿಮಾ ರತ್ನನ್​ ಪ್ರಪಂಚಕ್ಕೆ ಸರಳ ಮುಹೂರ್ತ ನೆರವೇರಿದೆ. ಸೋಮವಾರ ಇಡೀ ತಂಡ ಒಂದೆಡೆ ಸೇರಿ ಮುಹೂರ್ತ ಮುಗಿಸಿಕೊಂಡಿದ್ದು, ರಾಜಕುಮಾರ್ ಖ್ಯಾತಿಯ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಕ್ಲಾಪ್​ ಮಾಡುವ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರು.

ರೋಹಿತ್​ ಪದಕಿ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ನಿರ್ಮಾಪಕ ವಿಜಯ್​ ಕಿರಗಂದೂರು, ನಿರ್ದೇಶಕ ಪ್ರಶಾಂತ್​ ನೀಲ್​, ಕಲಾವಿದರಾದ ರವಿಶಂಕರ್​ ಗೌಡ, ಪ್ರಮೋದ್​, ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಸಹ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದರು.

ಸದ್ಯ ಮುಹೂರ್ತ ಮುಗಿಸಿಕೊಂಡಿರುವ ಚಿತ್ರತಂಡ, ಇನ್ನೆರಡು ವಾರಗಳ ಬಳಿಕ ಮೈಸೂರಿನಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಲು ಯೋಜನೆ ಹಾಕಿದ್ದಾರೆ. ಅದಾದ ಬಳಿಕ ಉತ್ತರ ಕರ್ನಾಟಕ, ಅದು ಮುಗಿಯುತ್ತಿದ್ದಂತೆ ಉತ್ತರ ಭಾರತದತ್ತ ಪ್ರಯಾಣ ಬೆಳೆಸಲಿದೆ ತಂಡ.

ಈಗಾಗಲೇ ಈ ಚಿತ್ರಕ್ಕೆ ರೆಬಾ ಮೋನಿಕಾ ನಾಯಕಿಯಾಗಿ ಆಯ್ಕೆಯಾಗಿದ್ದು, ವಿಶೇಷ ಎಂಬಂತೆ ಹಿರಿಯ ನಟಿ ಉಮಾಶ್ರೀ ಈ ಚಿತ್ರದ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ನಿರ್ದೇಶಕ ರೋಹಿತ್​ ಪದಕಿ ಅಧಿಕೃತ ಮಾಡಿದ್ದಾರೆ. ಕಾರ್ತಿಕ್​ ಗೌಡ ಮತ್ತು ಯೋಗಿ ಜಿ ರಾಜ್​ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.