ಸಾಂದರ್ಭಿಕ ಚಿತ್ರ 
ನ್ಯೂಸ್

ಹುಡುಗಿಯರಿಗೆ ಹಾರ್ಟ್ ಸಿಂಬಲ್ ಕಳುಹಿಸುವುದು ಅಪರಾಧ: ಈ ದೇಶ ಜಾರಿಗೆ ತಂದಿದೆ ನೂತನ ಕಾನೂನು..

ಅಬುಧಾಬಿ: ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯರಿಗೆ ಹಾರ್ಟ್ ಸಿಂಬಲ್ ಕಳುಹಿಸಿದ್ರೆ 2 ವರ್ಷ ಜೈಲು ಶಿಕ್ಷೆ ಎಂಬ ನೂತನ ಕಾನೂನನ್ನು ಕುವೈತ್​ ಸರ್ಕಾರವು ಜಾರಿಗೆ ತಂದಿದೆ.

ಇದನ್ನೂ ಓದಿ: ಹೆತ್ತ ಮಗನ ಪ್ರಾಣ ತೆಗೆದು ಪೊಲೀಸರಿಗೆ ಶರಣಾದ ವಯೋವೃದ್ಧ

ವಾಟ್ಸಾಪ್ ಅಥವಾ ಯಾವುದೇ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಮಹಿಳೆಯರಿಗೆ ಹೃದಯದ ಎಮೋಜಿಯನ್ನು ಕಳುಹಿಸುವುದು ದುಷ್ಕೃತ್ಯವನ್ನುವಾಗಿದ್ದು, ಇದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಜೈಲು ಶಿಕ್ಷೆ ಜತೆಗೆ 2,000 ಕುವೈತ್ ದಿನಾರ್‌ಗಳ ದಂಡವನ್ನೂ ಕಟ್ಟಬೇಕು ಎಂದು ಅಲ್ಲಿನ ಸರ್ಕಾರ ಹೇಳಿದೆ. ಕುವೈತ್​ನಲ್ಲಿ ಆನ್‌ಲೈನ್ ಚಾಟಿಂಗ್‌ನಲ್ಲಿ ಹಾರ್ಟ್ ಇಮೋಜಿಯನ್ನು ಕಳುಹಿಸುವವರ ವಿರುದ್ಧ ಹುಡುಗಿಯರು ದೂರು ನೀಡಿದರೆ ಅದನ್ನು ಕಿರುಕುಳ ಎಂದು ಪರಿಗಣಿಸಲಾಗುತ್ತದೆ.

ಸೌದಿ ಅರೇಬಿಯಾದಲ್ಲೂ ಕೂಡ ಈ ರೀತಿಯ ನಡವಳಿಕೆಯನ್ನು ಅಪರಾಧ ಎಂದು ಪರಿಗಣಿಸಲಾಗುತ್ತಿದ್ದು, ಆನ್‌ಲೈನ್ ಚಾಟಿಂಗ್​​ ವೇಳೆ ನಿರ್ದಿಷ್ಟ ಚಿತ್ರಗಳು ಮತ್ತು ಭಾವನೆಗಳನ್ನು ಬಳಸುವುದು ಕಿರುಕುಳವಾಗಿದ್ದು, ಇದು ಒಂದು ರೀತಿಯ ಅಪರಾಧವಾಗಿದೆ. ಪುನರಾವರ್ತಿತ ಉಲ್ಲಂಘನೆಯು 300,000 ಸೌದಿ ರಿಯಾಲ್‌ಗಳ ಕಠಿಣ ಶಿಕ್ಷೆಗೆ ಕಾರಣವಾಗಬಹುದು ಮತ್ತು ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆಗೆ ಕಾರಣವಾಗಬಹುದು. ಸೈಬರ್ ಕ್ರೈಮ್ ತಜ್ಞರ ಪ್ರಕಾರ, ವಾಟ್ಸಾಪ್‌ನಲ್ಲಿ ಕೆಂಪು ಹೃದಯಗಳನ್ನು ಕಳುಹಿಸುವುದನ್ನು ಸೌದಿ ಕಾನೂನಿನ ಅಡಿಯಲ್ಲಿ ಕಿರುಕುಳ ಎಂದು ಪರಿಗಣಿಸಬಹುದಾಗಿದೆ.(ಏಜೆನ್ಸೀಸ್​)