ನ್ಯೂಸ್

ವ್ಯಾಟ್ಸ್​ಆ್ಯಪ್​ ವೆಬ್​ ಬಳಕೆದಾರರೇ ಎಚ್ಚರ! ಡೇಟಾ ಸೋರಿಕೆ ತಪ್ಪಿಸಲು ಈಗಲೇ ಈ ಫೀಚರ್ ಆನ್​ ಮಾಡಿಕೊಳ್ಳಿ​ | Feature

ಮೋಹನ್​ ಶೆಟ್ಟಿ

ನವದೆಹಲಿ: ಪ್ರಸ್ತುತ ಡಿಜಿಟಲ್​ ಯುಗದಲ್ಲಿ ಎಲ್ಲವೂ ಶರವೇಗದಲ್ಲಿ ಸಾಗುತ್ತಿದೆ. ಇದರ ಸಹಾಯದಿಂದ ಮನುಷ್ಯನ ದಿನನಿತ್ಯದ ಕೆಲಸಗಳು ಈಗ ಅತ್ಯಂತ ಸರಳ, ಸುಲಭ ಹಾಗೂ ಸರಾಗವಾಗಿ ಈಡೇರುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣದ ಆ್ಯಪ್​ಗಳು ಎಂಟ್ರಿ ಆದಗಿನಿಂದಲೂ ಉದ್ಯೋಗಿಗಳ ದೈನಂದಿನ ಕಾರ್ಯಗಳು ಆನ್​ಲೈನ್​ ಆಗಿಬಿಟ್ಟಿವೆ. ಹಲವಾರು ಪ್ಲಾಟ್​ಫಾರ್ಮ್​ಗಳ ಪೈಕಿ ಜನರಿಗೆ ಅತ್ಯವಶ್ಯಕವಾಗಿರುವುದು ವ್ಯಾಟ್ಸ್​ಆ್ಯಪ್ (Feature). ಇದೊಂದರ ಸಹಾಯದಿಂದ ಜನರು ತಮ್ಮ ಕಂಪ್ಯೂಟರ್​ ಮತ್ತು ಮೊಬೈಲ್​ ಎರಡರಲ್ಲಿಯೂ ಏಕಕಾಲಕ್ಕೆ ಬಳಕೆ ಮಾಡಬಹುದಾಗಿದೆ. ವ್ಯಾಟ್ಸ್​ಆ್ಯಪ್​ ವೆಬ್​ ಉತ್ತಮ ಎನಿಸಿದರೂ, ಬಳಕೆದಾರರು ತಮ್ಮ ಖಾಸಗಿ ಡೇಟಾವನ್ನು ಯಾರಾದರೂ ಕಸಿಯಬಹುದೇ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾರೆ. ಇದಕ್ಕಾಗಿ ಉದ್ಯೋಗದ ಸ್ಥಳದಲ್ಲಿ ತುಂಬ ಎಚ್ಚರಿಕೆಯಿಂದಲೇ ಕೆಲಸ ಮಾಡುತ್ತಾರೆ.

ಖಾಸಗಿ ಡೇಟಾ ಸೋರಿಕೆ

ವ್ಯಾಟ್ಸ್​ಆ್ಯಪ್​ ತನ್ನ ಬಳಕೆದಾರರಿಗೆ ಸದಾ ಒಂದಲ್ಲ ಒಂದು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಅದು ಸ್ಟೇಟಸ್​, ಫೋಟೋ ವ್ಯೂವ್​, ಚಾಟ್​ ಲಾಕ್​ ಸೇರಿದಂತೆ ಒಂದಷ್ಟು ಭದ್ರತಾ ಫೀಚರ್​ಗಳಲ್ಲಿ ಆಗಾಗ್ಗೆ ಅಪ್ಡೇಟ್​ ಅನ್ನು ಹೊತ್ತು ತರುತ್ತಿರುತ್ತದೆ. ಅದರಲ್ಲೂ ಕಚೇರಿಗಳಲ್ಲಿ ಕುಳಿತು ಕಂಪ್ಯೂಟರ್​ ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ವ್ಯಾಟ್ಸ್​ಆ್ಯಪ್​ ವೆಬ್ ಬಳಸುವ ಬಳಕೆದಾರರು ಪ್ರೈವೆಸಿ ವಿಷಯದಲ್ಲಿ ಸ್ವಲ್ಪ ತೊಂದರೆ ಎದುರಿಸುತ್ತಾರೆ. ಏಕೆಂದರೆ, ತಾವು ಬಳಸುವ ಕಂಪ್ಯೂಟರ್​ನಲ್ಲಿ ಲಾಗಿನ್ ಆಗಿರುವ ವಾಟ್ಸಾಪ್ ಅನ್ನು ಯಾರಾದರೂ ನಾವಿಲ್ಲದ ಸಮಯದಲ್ಲಿ ತೆರೆದು ನೋಡಿದರೆ ಹೇಗೆ? ಅದರಲ್ಲಿ ಸಂದೇಶಗಳು ಅಥವಾ ಖಾಸಗಿ ಡೇಟಾವನ್ನು ಸೋರಿಕೆ ಮಾಡಿದರೆ ಏನು ಮಾಡೋದು ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಇದೇ ಕಾರಣಕ್ಕೆ ಪ್ರತಿ ಬಾರಿ ಅವರು ಎಲ್ಲಾದರೂ ಹೊರಗೆ ಹೋಗುವಾಗ ಲಾಗ್​ಔಟ್​ ಮಾಡಿಯೇ ತೆರಳುತ್ತಾರೆ. ವಾಪಾಸ್​ ಬಂದ ನಂತರ ಮತ್ತೆ ಹೊಸದಾಗಿ ಲಾಗಿನ್ ಆಗ್ತಾರೆ. ಇದು ಕೆಲವರಿಗೆ ತೀರ ಕಿರಿಕಿರಿಯನ್ನು ಉಂಟು ಮಾಡುತ್ತದೆ.

ಕೆಲವೊಮ್ಮೆ ತಕ್ಷಣ ಕಾಣಿಸುವುದಿಲ್ಲ

ಆಫೀಸ್​ ಕುರ್ಚಿಯಲ್ಲಿ ಕುಳಿತ ನಂತರ ಮತ್ತೆ ಲಾಗ್ ಇನ್ ಆಗುತ್ತಲೇ ಇರುವುದು ಒಂದಷ್ಟು ಉದ್ಯೋಗಿಗಳಿಗೆ ಸಮಸ್ಯೆ. ಅದರಲ್ಲೂ ಪದೇ ಪದೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಲಾಗ್ ಇನ್ ಆಗುವುದು ಬೇಸರ ತರಿಸುತ್ತದೆ. ಲಾಗಿನ್ ಆದರೂ ಕೆಲವೊಮ್ಮೆ ಹಿಂದಿನ ಮೆಸೇಜ್​ಗಳು ತಕ್ಷಣ ಕಾಣಿಸುವುದಿಲ್ಲ. ಅದಕ್ಕಾಗಿಯೇ ವಾಟ್ಸಾಪ್ ಇಂತಹ ಸಮಸ್ಯೆಗಳನ್ನು ಬಗೆಹರಿಸಲು ವ್ಯಾಟ್ಸ್​ಆ್ಯಪ್​ ಸ್ಕ್ರೀನ್ ಲಾಕ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವು ನಮ್ಮ ಡೇಟಾ ಸುರಕ್ಷತೆಗೆ ತುಂಬಾ ಉಪಯುಕ್ತವಾಗಿದೆ. ಇದನ್ನು ಬಳಕೆ ಮಾಡುವುದು ಹೇಗೆ? ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.

ಮೊದಲು web.whatsapp.com ತೆರೆಯಿರಿ. ಅಲ್ಲಿ ಕ್ಯೂಆರ್​ ಕೋಡ್‌ನೊಂದಿಗೆ ಲಾಗಿನ್ ಮಾಡಿ. ನಂತರ ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿ, ಪ್ರೈವೆಸಿ ಸೆಟ್ಟಿಂಗ್‌ಗಳಿಗೆ ಹೋಗಿ, ಪೂರ ಕೆಳಗೆ ಬನ್ನಿ. ಅಲ್ಲಿ ನಿಮಗೆ ಕಾಣಿಸುವ ಸ್ಕ್ರೀನ್ ಲಾಕ್ ಆಯ್ಕೆಯನ್ನು ಕ್ಲಿಕ್​ ಮಾಡಿ. ತದನಂತರ, ಪಾಸ್‌ವರ್ಡ್ ರಚಿಸಲು ವ್ಯಾಟ್ಸ್​ಆ್ಯಪ್​ ಪರದೆಯ ಮೇಲಿನ ಸೂಚನೆಗಳನ್ನು ಅನುಸರಿಸಿ. ನೀವು ಬಯಸಿದರೆ ಸ್ಕ್ರೀನ್ ಲಾಕ್ ಸಮಯವನ್ನು ಸಹ ಹೊಂದಿಸಬಹುದು. ಈ ವೈಶಿಷ್ಟ್ಯದ ಮೂಲಕ ನಿಮ್ಮ ವಾಟ್ಸಾಪ್​ ವೆಬ್ ಅನ್ನು ಈಗ ಮತ್ತಷ್ಟು ಸುರಕ್ಷಿತವಾಗಿ ಬಳಸಬಹುದಾಗಿದೆ,(ಏಜೆನ್ಸೀಸ್).