Donald Trump : ರಷ್ಯಾ ಹಾಗೂ ಯೂಕ್ರೇನ್ ಯುದ್ಧವನ್ನು ನಿಯಂತ್ರಣಕ್ಕೆ ತರುವ ಬಗ್ಗೆ ಮಾತುಕತೆ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜನೆ ರೂಪಿಸಿಕೊಂಡಿದ್ದಾರೆ. ಕಳೆದ ವಾರ ಯೂಕ್ರೇನ್ ಅಂಗೀಕರಿಸಿದ 30 ದಿನಗಳ ಕದನ ವಿರಾಮ ಪ್ರಸ್ತಾವನೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬೆಂಬಲ ಪಡೆಯಲು ಟ್ರಂಪ್ ಪ್ರಯತ್ನಿಸುತ್ತಿದ್ದಾರೆ.
ಟ್ರಂಪ್, ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನಾಳೆ ಮಾತನಾಡುವ ಮೂಲಕ ಯುದ್ಧವನ್ನು ಕೊನೆಗೊಳಿಸುವುದರ ಬಗ್ಗೆ ಇಬ್ಬರೂ ನಾಯಕರು ಚರ್ಚಿಸುವ ಸಾಧ್ಯತೆಯಿದೆ.
ಇನ್ನೂ ಈ ಬಗ್ಗೆ ಟ್ರಂಪ್ ಪ್ರತಿಕ್ರಿಯಿಸಿದ್ದು, ಯುದ್ಧ ಸಂಬಂಧ ನಾನು ಅಧ್ಯಕ್ಷ ಪುಟಿನ್ ಅವರೊಂದಿಗೆ ನಾಳೆ ಮಾತನಾಡುತ್ತೇನೆ. ಈಗಾಗಲೇ ವಾರಾಂತ್ಯದಲ್ಲಿ ಬಹಳಷ್ಟು ಕೆಲಸಗಳು ಮುಗಿದಿವೆ ಎಂದು ಫ್ಲೋರಿಡಾದಿಂದ ವಾಷಿಂಗ್ಟನ್ಗೆ ಹಿಂತಿರುಗುವಾಗ ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಟ್ರಂಪ್ ಹೇಳಿದರು.
ಯೂಕ್ರೇನ್ ಮತ್ತು ರಷ್ಯಾ ಎರಡೂ ಕಡೆಯವರು ಈಗಾಗಲೇ ಬಹಳಷ್ಟು ಚರ್ಚಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಾವು ಈಗಾಗಲೇ ಅದರ ಬಗ್ಗೆ ಮಾತನಾಡುತ್ತಿದ್ದೇವೆ, ಈ ಸಂಬಂಧ ನಾವು ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.