ನ್ಯೂಸ್

ದ್ವಿತೀಯ ಪಿಯುಸಿ ಉತ್ತರಪತ್ರಿಕೆಗಳ ಸ್ಕ್ಯಾನ್ ಪ್ರತಿ ಡೌನ್​ಲೋಡ್​ಗೆ ಇಂದಿನಿಂದಲೇ ಅವಕಾಶ

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮೌಲ್ಯಮಾಪನ ಮಾಡಿರುವ ಉತ್ತರ ಪತ್ರಿಕೆಗಳ ಸ್ಕ್ಯಾನ್​ ಪ್ರತಿಗಳನ್ನು ಮೊದಲ ಹಂತದಲ್ಲಿ ಶನಿವಾರ ಅಪ್‌ಲೋಡ್ ಮಾಡಲಾಗಿದ್ದು, ಡೌನ್‌ಲೋಡ್ ಮಾಡಿಕೊಳ್ಳುವಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ವಿದ್ಯಾರ್ಥಿಗಳಿಗೆ ತಿಳಿಸಿದೆ.

ಸ್ಕ್ಯಾನ್​ ಪ್ರತಿಗೆ ಅರ್ಜಿ ಸಲ್ಲಿಸಲು ಏ.27 ಕೊನೆಯ ದಿನವಾಗಿತ್ತು. ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗಾಗಿ ಹಂತ ಹಂತವಾಗಿ ಉತ್ತರ ಪತ್ರಿಕೆಗಳ ಸ್ಕ್ಯಾನ್​ ಪ್ರತಿಯನ್ನು ಅಪ್‌ಲೋಡ್ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಸ್ಕ್ಯಾನ್​ ಪ್ರತಿಗಳನ್ನು ಶನಿವಾರ ಅಪ್‌ಲೋಡ್ ಮಾಡಲಾಗಿದೆ.

ಮೊದಲ ಹಂತದಲ್ಲಿ ಅಪ್‌ಲೋಡ್ ಆಗದ ಪ್ರತಿಗಳನ್ನು ಎರಡನೇ ಹಂತದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಸ್ಕ್ಯಾನ್​ ಪ್ರತಿ ಅಪ್‌ಲೋಡ್ ಆದ ಬಳಿಕ ವಿದ್ಯಾರ್ಥಿಗಳ ಮೊಬೈಲ್‌ಫೋನ್​ಗೆ ಸಂದೇಶ ರವಾನೆಯಾಗಲಿದೆ ಎಂದು ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ.