ಸಾಂದರ್ಭಿಕ ಚಿತ್ರ 
ನ್ಯೂಸ್

ಮನೆಯಲ್ಲಿ ಬೈದ ತಾಯಿ, ಶಾಲೆಯಲ್ಲಿ ಪ್ರಾಣ ತ್ಯಾಗ ಮಾಡಿ ಮಗ

ಕಾನ್ಪುರ: ಮನೆಯಲ್ಲಿ ತಾಯಿ ಬೈದಿದ್ದಕ್ಕೆ 9 ವರ್ಷದ ಮಗು ಶಾಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಇದನ್ನೂ ಓದಿ: ಮುತ್ತು ತಂದ ಆಪತ್ತು: ಪತಿಯ ನಾಲಿಗೆಯನ್ನೇ ಕಚ್ಚಿ ಗಾಯಗೊಳಿಸಿದ ಹೆಂಡತಿ

ಮೃತ ಬಾಲಕನನ್ನು ವಿವೇಕ್ ಕುಮಾರ್ ಎಂದು ಗುರುತಿಸಲಾಗಿದ್ದು, 3ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಶಾಲೆಯಿಂದ ಬಂದ ಬಳಿಕ ತಾಯಿಯು ವಿವೇಕ್ ಮತ್ತು ಆತನ ಸಹೋದರ ಹಿಮಾಂಶುವಿಗೆ ಊಟ ಮಾಡವಂತೆ ಹೇಳಿದ್ದಳು. ಆಗ ಹಿಮಾಂಶು ಊಟ ಮಾಡಲು ಶುರು ಮಾಡಿದ್ದು, ವಿವೇಕ್​ ಊಟವನ್ನು ಮಾಡದೇ ಸೈಕಲ್​ ತೆಗೆದುಕೊಂಡು ಆಟವಾಡಲು ತೆರಳಿದ್ದ.

ಆಗ ತಾಯಿಯು ಆತನಿಗೆ ಬೈದು ಊಟ ಮಾಡುವಂತೆ ಬುದ್ಧಿವಾದ ಹೇಳಿದ್ದಾಳೆ. ಇದರಿಂದ ಕೋಪಗೊಂಡಿದ್ದ ಬಾಲಕ ರಾತ್ರಿಯ ಊಟವನ್ನು ಮಾಡದೇ ಹಾಗೇ ಮಲಗಿದ್ದ. ಮರುದಿನ ಬೆಳಿಗ್ಗೆ ಶಾಲೆಗ ತೆರೆಳಿದ್ದ ಬಾಲಕ ಶೌಚಾಲಯಕ್ಕೆ ಹೋಗಿ ಟೈನಿಂದ ನೇಣು ಬಿಗಿದುಕೊಂಡು ಪ್ರಾಣ ತ್ಯಜಿಸಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಮೃತನ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.(ಏಜೆನ್ಸೀಸ್​​)