ಅಮೆರಿಕ: ಶಿಕ್ಷಕರನ್ನು ದೇವರಂತೆ ನೋಡುವ ವಿದ್ಯಾರ್ಥಿಗಳಿದ್ದಾರೆ. ಆದರೆ ಕ್ಲಾಸ್‌ನಲ್ಲಿ ಮೊಬೈಲ್ ಬಳಸುತ್ತಿದ್ದ ವಿದ್ಯಾರ್ಥಿಯ ಕೈಯಿಂದ ಮೊಬೈಲ್ ಕಿತ್ತುಕೊಂಡ ಶಿಕ್ಷಕ ಮೇಲೆಯೇ ಆಕೆ ಪೆಪ್ಪರ್ ಸ್ಪೇ ಮಾಡಿದ್ದಾರೆ.
ಶುಕ್ರವಾರ ನಡೆದ ಈ ಘಟನೆಯನ್ನು ಮತ್ತೊಬ್ಬ ವಿದ್ಯಾರ್ಥಿ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಟೆನ್ನೆಸ್ಸಿಯ ನ್ಯಾಶ್‌ವಿಲ್ಲೆ ಬಳಿಯ ಆಂಟಿಯೋಕ್ ಪ್ರೌಢಶಾಲೆಯಲ್ಲಿ ಈ ದುರಂತ ಘಟನೆ ನಡೆದಿದೆ ಎಂದು ಬರೆದು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಕ್ಲಾಸ್‌ನಲ್ಲಿ ಮೊಬೈಲ್ ಬಳಸುತ್ತಿದ್ದ ವಿದ್ಯಾರ್ಥಿಯೊಬ್ಬಳು ಶಿಕ್ಷಕರ ಕೈಗೆ ಸಿಕ್ಕಿಬಿದ್ದಳು. ಈ ವೇಳೆ ಶಿಕ್ಷಕರು ಆಕೆಯ ಮೊಬೈಲ್ ವಶಕ್ಕೆ ಪಡೆದಿದ್ದಾನೆ. ಕೋಪಗೊಂಡ ವಿದ್ಯಾರ್ಥಿನಿ ಗುರು ಎಂಬುವುದನ್ನು ನೋಡದೇ ಟೀಚರ್ ಮುಖಕ್ಕೆ ಖಾರದ ಪುಡಿ ಸ್ಪ್ರೇ ಮಾಡಿದ್ದು, ಇದರಿಂದ ಶಿಕ್ಷಕ ಕಣ್ಣು ಮುಖ ಉರಿ ತಡೆಯಲಾಗದೇ ತರಗತಿಯಿಂದ ಹೊರಗೆ ಹೋಗಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶಿಕ್ಷಕರಿಗೇ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದು, ದೂರಾದೃಷ್ಟವೇ ಸರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿ ಬೇಸರ ಹೊರ ಹಾಕಿದ್ದಾರೆ.