ಬೆಂಗಳೂರು: ಕರೊನಾ ವೈರಸ್ ಮಹಾಮಾರಿಯಿಂದ ಜೀವನ ಶೈಲಿಯೇ ಏರುಪೇರಾಗಿದೆ. ಅಂದುಕೊಂಡಂಗೆ ನಡೆದಿದ್ದರೆ ಈಗಾಗಲೇ ಶಾಲೆ-ಕಾಲೇಜುಗಳು ಆರಂಭವಾಗಬೇಕಿತ್ತು. ಆದರೆ ಕರೊನಾ ಈವರೆಗೂ ಕಾಣೆಯಾಗದಿರುವುದು ಶೈಕ್ಷಣಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕಿದೆ.
ಇದರ ನಡುವೆ ಶಾಲೆ-ಕಾಲೇಜು ಯಾವಾಗ ಆರಂಭವಾಗುತ್ತದೆ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಕೆಲವರು ಕರೊನಾ ಹೋಗೋವರೆಗೂ ಶುರು ಮಾಡಬೇಡಿ ಎಂದಿದ್ದಾರೆ. ಈ ಎಲ್ಲ ಗೊಂದಲಗಳ ನಡುವೆ ಸರ್ಕಾರ ಆನ್ಲೈನ್ ತರಗತಿಗಳನ್ನು ಆರಂಭ ಮಾಡಿದ್ದು, ಪರ-ವಿರೋಧ ಚರ್ಚೆಯಾಗುತ್ತಲೇ ಇದೆ. ಇದನ್ನೂ ಓದಿ: ಮುತ್ತಪ್ಪ ರೈ ಆಸ್ತಿಯಲ್ಲಿ 2ನೇ ಪತ್ನಿಗೆ ಏನೇನು ಸಿಕ್ತು? ಆರಂಭವಾಗಲಿದೆಯಾ ಆಸ್ತಿ ವಿವಾದ?
ಚರ್ಚೆಯೇ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಆಸಕ್ತಿದಾಯ ಜೋಕ್ಸ್ಗಳು ಹರಿದಾಡುತ್ತವೆ. ಅದರಲ್ಲೊಂದು ಹೀಗಿದೆ... "ಶಾಲೆಯ ಎಲ್ಲ ಕ್ಲಾಸ್ ಅನ್ನು ಆನ್ಲೈನ್ನಲ್ಲಿ ನಡೆಸುವುದಾದರೆ, ಮಧ್ಯಾಹ್ನದ ಬಿಸಿಯೂಟವನ್ನು ಜೊಮ್ಯಾಟೋದವರು ಕೊಡುತ್ತಾರಾ" ಎಂದು ಕೇಳಿದ್ದಾರೆ. ಸಮಯಕ್ಕೆ ತಕ್ಕ ಜೋಕ್ಸ್ ಸೃಷ್ಟಿ ಮಾಡಿದವನ ಯೋಚನಾ ಲಹರಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಲೇಜುಗಳ ಪುನರಾರಂಭ ಯಾವಾಗ?: ವಿದ್ಯಾರ್ಥಿಗಳ ಗೊಂದಲಕ್ಕೆ ಸಲಹಾ ಸಮಿತಿ ಅಧ್ಯಕ್ಷರ ಪರಿಹಾರ