ನ್ಯೂಸ್

School Bus : ಶಾಲಾ ಬಸ್​ಗೆ ಬೆಂಕಿ ಬಿದ್ದು 25 ವಿದ್ಯಾರ್ಥಿಗಳು ಸಾವು

ಥೈಲ್ಯಾಂಡ್ : 44 ಶಾಲಾ ( School )  ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಶಾಲಾ ಬಸ್ ( School Bus ) ​ ಬೆಂಕಿಯಿಂದ ಹೊತ್ತಿ ಉರಿದಿದ್ದ ಪರಿಣಾಮ 25 ವಿದ್ಯಾರ್ಥಿಗಳು ( 25 children ) ಸಾವನ್ನಪ್ಪಿದ್ದಾರೆ.  ಸ್ಥಳೀಯ ಕಾಲಮಾನ ಮಧ್ಯಾಹ್ನ 12.30 ರ ಸುಮಾರಿಗೆ ಥೈಲ್ಯಾಂಡ್​ನ ರಂಗ್‌ಸಿಟ್ ಶಾಪಿಂಗ್ ಮಾಲ್ ಬಳಿಯ ಫಾಹೋನ್ ಯೋಥಿನ್ ರಸ್ತೆಯಲ್ಲಿ ಅವಘಡ ಸಂಭವಿಸಿದೆ.

ಲಾನ್ ಸಕ್ ಜಿಲ್ಲೆಯ ವಾಟ್ ಖಾವೊ ಪ್ರಾಯ ಸಂಘರಮ್‌ನಿಂದ ಆಯೋಜಿಸಲಾದ ಶೈಕ್ಷಣಿಕ ಪ್ರವಾಸದಲ್ಲಿ ಆರು ಶಿಕ್ಷಕರು ಸಹ ಭಾಗವಹಿಸಿದ್ದರು. ಅವರ ಬಗ್ಗೆ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.

ವಿಡಿಯೋದಲ್ಲಿ ಏನಿದೆ?: 

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇಡೀ ಬಸ್ ( School bus ) ಬೆಂಕಿಗೆ ಆಹುತಿಯಾಗಿರುವುದು ಕಂಡು ಬಂದಿದೆ. ರಸ್ತೆಯಲ್ಲಿ ನಿಲ್ಲಿಸಿದ ಬಸ್ಸಿನ ಹೊರಗೆ ಕಪ್ಪು ಹೊಗೆಯು ಕಾಣಿಸಿಕೊಂಡಿತ್ತು, ಸದ್ಯ ವಿದ್ಯಾರ್ಥಿಗಳ ವಯಸ್ಸು ತಿಳಿದುಬಂದಿಲ್ಲ.

ಟೈರ್ ಸ್ಫೋಟಗೊಂಡು ವಾಹನ ರಸ್ತೆ ತಡೆಗೋಡೆಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸ್ಥಳದಲ್ಲಿದ್ದ ರಕ್ಷಣಾ ಕಾರ್ಯಕರ್ತರು  ತಿಳಿಸಿದರು.